ಚಿಕ್ಕಮಗಳೂರು: ಇಲ್ಲಿನ ಜಾಮಿಯಾ ಅರೇಬಿಯ ಕಂಜುಲ್ ಈಮಾನ್ ಸಂಸ್ಥೆಯಲ್ಲಿ ವಿವಿಧ ಸುನ್ನಿ ಸಂಘಟನೆಗಳ ಪದಾಧಕಾರಿಗಳು ಹಾಗೂ ಧಾರ್ಮಿಕ ಮುಖಂಡರ ಸಭೆಯು ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದ್ ರಝ್ವಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಶನಿವಾರ ನಡೆದ ಈ ಸಭೆಯಲ್ಲಿ ಮುಂಬರುವ ಮೇ 24 ಅಥವಾ 25 ರಂದು ಪವಿತ್ರ ರಂಝಾನ್ ಹಬ್ಬ ಆಚರಿಸುವ ದಿನವಾದ್ದರಿಂದ ರಾಜ್ಯ ಸರ್ಕಾರವು ಮಸೀದಿ ಅಥವಾ ಈದ್ಗಾ ಮೈದಾನದಲ್ಲಿ ನಮಾಝ್ ನಿರ್ವಹಿಸಲು ಅನುಮತಿ ನೀಡಿದ್ದಲ್ಲಿ ಜಿಲ್ಲಾದ್ಯಂತ ನಮಾಝ್ ನಿರ್ವಹಿಬೇಕಾಗುತ್ತದೆ, ಇಲ್ಲವಾದಲ್ಲಿ ಲಾಕ್ ಡೌನ್ ನಿಯಮಾನುಸಾರ ಯಥಾಸ್ಥಿತಿ ಕಾಪಾಡುವಲ್ಲಿ ಹಿಂಜರಿಯಬಾರದು ಎಂದು ಮುಸ್ಲಿಂ ಸಮುದಾಯದ ಎಲ್ಲರಿಗೂ ಮನವರಿಕೆ ಮಾಡಬೇಕಾಗಿ ಧಾರ್ಮಿಕ ಮುಖಂಡರ ತಂಡವು ಸದೃಢರಾಗಿರಬೇಕಾಗಿ ಸಮಿತಿಯಲ್ಲಿ ನಿರ್ಧರಿಸಲಾಗಿದೆ.
ಅದಾಗಿ ವಿಶ್ವದಾದ್ಯತ ವ್ಯಾಪಕವಾಗಿ ಕೋರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಮತ್ತು ಅರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮುಸ್ಲಿಂ ಜಮಾತ್ ನ ಎಲ್ಲ ಕಾರ್ಯಕರ್ತರು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಿಕೊಂಡು ಕೆಲಸ ಮಾಡಲು ಸೂಚಿಸಲಾಗಿದೆ.
ಹಾಗು ಈ ಬಾರಿಯ ರಂಝಾನ್ ಹಬ್ಬದ ಆಚರಣೆಗೆ ವಸ್ತುಗಳನ್ನುಖರೀದಿಸಲು ಅನಾವಶ್ಯಕವಾಗಿ ಅಂಗಡಿ ಮುಂಗಟ್ಟುಗಳು ಅಥವಾ ಮಾರುಕಟ್ಟೆಗಳಲ್ಲಿ ಜನದಟ್ಟಣೆಯ ಪ್ರದೇಶವನ್ನಾಗಿ ಮರ್ಪಡಾಗುವದನ್ನು ನಿಯಂತ್ರಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಲಾಗಿದೆ.
ಈ ಸಭೆಯಲ್ಲಿ ಮುಖಂಡರುಗಳಾದ ಯೂಸುಫ್ ಹಾಜಿ, ಮನ್ಸೂರ್ ಅಹಮದ್ ಫಾರೂಕ್ ಅಹಮದ್ ರಾಜ್ಬಿ, ಅಖ್ತರ್ ಹುಸೈನ್ ಆರಿಫ್ ಅಲಿ ಖಾನ್ ಹಾಗು ಪ್ರಧಾನ ಕಾರ್ಯದರ್ಶಿಗಳಾದ ಹಾಜಿ ಫೈರೋಜ್ ಅಹಮದ್ ರಝಾವಿ ಮತ್ತು ಇನ್ನಿತರೆ ಧಾರ್ಮಿಕ ಮುಖಂಡರು ಉಪ್ಥಿತರಿದ್ದರು.