ನಿಝ್ಝು
ಉರುವಾಲು ಪದವು
v/s
ಹಮೀದ್ ಬಜ್ಪೆ
ಮುಸ್ಲಿಂ ಜಮಾಅತ್
ಪ್ರ: ಮಂಗಳೂರು ಏರ್ಪೋರ್ಟ್ ನಲ್ಲಿ ನಿನ್ನೆ ಏನು ನಡೆಯಿತು?
ಉ. ಅನಿವಾಸಿ ಕನ್ನಡಿಗರು ನಿನ್ನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಕ್ವಾರಂಟೈನ್ ಗೆ ಒಳಪಡುವ ಸಂದರ್ಭದಲ್ಲಾದ ಕೆಲ ವಿದ್ಯಮಾನಗಳು ನಿಜಕ್ಕೂ ಜಿಲ್ಲೆಗೇ ಅವಮಾನಕರ. ಈ ಘಟನೆಯ ಕುರಿತು ಕೆಲವು ಅಸಂಬದ್ಧ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕೆಲವೊಂದು ಸತ್ಯಕ್ಕೆ ವಿರುದ್ಧವಾಗಿದೆ.
ಪ್ರ: ಘಟನೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ?
ಉ. ಅರೋಗ್ಯ ಇಲಾಖೆ ಸೂಚಿಸಿದ ಕ್ವಾರಿಂಟಿನ್ ಸೆಂಟರ್ ಹೋಟೆಲ್ ಗಾಗಲಿ, ಏರ್ಪೋರ್ಟ್ ಗಾಗಲೀ ಯಾರಿಗೂ ಹೋಗಲು ಅವಕಾಶವಿರಲಿಲ್ಲ. ಜಿಲ್ಲೆಯ ಶಾಸಕರಿಗೂ ಪ್ರವೇಶ ತಡೆದಿದ್ದರು.
ಯಾವುದೇ ಸಂಘಟನೆಗಳಿಗೂ ಪ್ರಯಾಣಿಕರ ಕುಟುಂಬದವರಿಗೂ ಪ್ರವೇಶವಿರಲಿಲ್ಲ. ವಿದೇಶದಿಂದ ಬಂದ ಪ್ರಯಾಣಿಕರು ಫೋನ್ ಕರೆ ಮತ್ತು ವಾಟ್ಸಾಪ್ ಮೂಲಕ ರವಾನಿಸುತ್ತಿದ್ದ ಸುದ್ದಿಗಳು ಆತಂಕ ಮೂಡಿಸುತ್ತಿತ್ತು.
ವಿಮಾನ ನಿಲ್ದಾನದಲ್ಲಿದ್ದ ಅಧಿಕಾರಿಗಳೊಂದಿಗೆ ಈ ಬಗ್ಗೆ ವಿವರ ಕೇಳಿದಾಗ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಿರುವುದಾಗಿ ತಿಳಿಸಿದರು. ಈ ಬಗ್ಗೆ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳ ಬಗ್ಗೆ ನಾವು ಬೇರೆ ಬೇರೆ ಸಂಘಟನೆಗಳ ಪ್ರತಿನಿಧಿಗಳು ಪರಸ್ಪರ ಮಾತನಾಡುತ್ತಿದ್ದೆವು.
ರಾತ್ತಿ ಸುಮಾರು 2.30 ರ ಹೊತ್ತಲ್ಲಿ ನಾನು ಶಾಫಿ ಸ ಅದಿ, ಅಥಾವುಲ್ಲಾ ಜೋಕಟ್ಟೆ ಪರಸ್ಪರ ಪ್ರಯಾಣಿಕರ ಸ್ಥಿತಿಗತಿಗಳ ಬಗ್ಗೆ ಮತ್ತು ಪರಿಹಾರದ ಬಗ್ಗೆ ಚರ್ಚಿಸಿದ್ದೆವು. ವಿಮಾನ ನಿಲ್ದಾನದಲ್ಲಿದ್ದ ಐ.ಎ.ಎಸ್ ಅಧಿಕಾರಿ ರಾಹುಲ್ ಸಿಂದೆಯವರಿಗೆ ಕರೆಮಾಡಿ ಪ್ರಯಾಣಿಕರ ಆಹಾರ, ವಸತಿ ವ್ಯವಸ್ಥೆಗಳ ಅಸಮರ್ಪಕತೆಯ ಬಗ್ಗೆ ದೂರು ನೀಡಿದ್ದೆವು.
ಕೂಡಲೇ ಕಾರ್ಯಪ್ರವರ್ತರಾದ ಅವರು ತಮ್ಮ ಬಳಿಯಿದ್ದ ಆಹಾರದ ಪೊಟ್ಟಣಗಳನ್ನು ಪ್ರಯಾಣಿಕರಿಗೆ ವಿತರಿಸಿದ್ದರು. ಹೋಟೇಲ್ ಬಿಲ್ ಪಾವತಿ ಸಂಬಂಧಿಸಿ ಕೆಲವು ಪ್ರಯಾಣಿಕರು ತಕರಾರು ಮಾಡಿದ್ದರಿಂದ ಸುಮಾರು 32 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ತೆರಳುವುದು ವಿಳಂಭವಾಗಿ ಮುಂಜಾನೆ 3.30 ರ ಸುಮಾರಿಗೆ ಜಿಲ್ಲಾಡಳಿತ ಆ ಪ್ರಯಾಣಿಕರನ್ನು ಸ್ಟೇಟ್ ಬ್ಯಾಂಕ್ ಬಳಿಯ ಹೋಟೇಲ್ ಸಿಟಿ ವಾಕ್ ಗೆ ಕರೆದೊಯ್ದಿದೆ.
ಪ್ರಯಾಣಿಕರು ಬಸ್ಸಿನಿಂದಿಳಿದು ಹೋಟೇಲ್ ಪ್ರವೇಶಿಸುವ ಮಧ್ಯೆ ಕೆಲವರು ಪ್ರಯಾಣಿಕರಿಗೆ ಆಹಾರದ ಪೊಟ್ಟಣ, ನೀರು, ಹಣ್ಣು ಹಂಪಲು ಹಂಚಿದ್ದಾರೆ.ಸಹರಿಯ ಸಮಯವಾಗಿದ್ದರಿಂದ ಸ್ಪಲ್ಪ ಹೊತ್ತಿನಲ್ಲೇ ಯೆನೆಪೋಯ ಸಂಸ್ಥೆ ತಯಾರಿಸಿದ ಸಹರಿ ಊಟವನ್ನು ಜಿಲ್ಲಾಡಳಿತ ವಿತರಿಸಿದೆ. ಅದಲ್ಲದೆ ಯಾವ ಸಂಘಟನೆಯವರೂ, ಯಾರಿಗೂ ಹೋಟೇಲ್ ವ್ಯವಸ್ಥೆಯನ್ನಾಗಲೀ ಇನ್ನಿತರ ಸೌಕರ್ಯವನ್ನಾಗಲೀ ಕಲ್ಪಿಸುವ ಯಾವ ಅವಕಾಶವೂ ಅಲ್ಲಿರಲಿಲ್ಲ.
ಯಾರು ಅದನ್ನು ಮಾಡಿಯೂ ಇಲ್ಲ. ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಗೆ ಸಹಾಯ ಮಾಡಿದ್ದೇವೆಂಬುದು ಶುದ್ಧ ಸುಳ್ಳು. ವಿಮಾನ ನಿಲ್ದಾಣದ ಆವರಣದೊಳಗೆ ಜಿಲ್ಲಾಡಳಿತ, ವಿಮಾನ ನಿಲ್ದಾಣದ ಸಿಬ್ಬಂಧಿ, ವಾಹನ ಚಾಲಕರಲ್ಲದೆ ಯಾರೂ ಪ್ರವೇಶಿಸಲಿಲ್ಲ.
ಪ್ರ: ಪ್ರಯಾಣಿಕರು ನೀಡಿದ ಮಾಹಿತಿಯನ್ನು ಅನುಸರಿಸಿ ಅಧಿಕಾರಿಗಳೊಂದಿಗೆ ಮಾತನಾಡಲು ಅವಕಾಶವಿರಲಿಲ್ಲವೇ? ಅಸೌಕರ್ಯದ ಬಗ್ಗೆ ವಿವರಿಸಿಕೊಡಬಹುದಿತ್ತಲ್ಲವೇ?
ಉ. ಖಂಡಿತ, ನಮಗೆ ಪ್ರಯಾಣಿಕರು ನೀಡಿದ ಮಾಹಿತಿಯನ್ನು ನಾವು ಮತ್ತು ಇತರ ಸಂಘಟನೆಯ ನಾಯಕರು ಅಧಿಕಾರಿಗಳಿಗೆ ತಿಳಿಸಿ, ಕೂಡಲೇ ಸರಿಪಡಿಸುವಂತೆ ಕೇಳಿಕೊಳ್ಳುತ್ತಿದ್ದೆವು. ಮುಂಜಾನೆಯ ತನಕ ನಾವು ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಲೇ ಇದ್ದೆವು.
ಪ್ರ: ಪ್ರಯಾಣಿಕರಿಗೆ ಸಹರಿ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗಿಲ್ಲವೇ?
ಉ. ಯೆನೆಪೋಯ ಸಂಸ್ಥೆ ವತಿಯಿಂದ ಎಲ್ಲರಿಗೂ ಸಹರಿ ವ್ಯವಸ್ಥೆ ಮಾಡಲಾಗಿತ್ತು. 4 ಗಂಟೆ ಹೊತ್ತಿಗೆ ಅದನ್ನು ಅಲ್ಲಿನ ಸಿಬ್ಬಂದಿಗಳು ತಲುಪಿಸಿಯೂ ಕೊಟ್ಟಿದ್ದರು.
ಪ್ರ: ಬಾಕಿ ಉಳಿದ ಮೂವತ್ತೆರಡು ಮಂದಿಯನ್ನು ಹೇಗೆ ಕ್ವಾರಿಂಟಿನ್ ಗೆ ತಲುಪಿಸಲಾಯಿತು?
ಉ. ಸುಮಾರು 3.30 ರ ಹೊತ್ತಿಗೆ ಏರ್ಪೋರ್ಟ್ ನಿಂದ ಸರಕಾರಿ ಬಸ್ ಮೂಲಕ ಅವರನ್ನು ಸಿಟಿ ವಾಕ್ ಹೋಟೆಲ್ ಗೆ ತಲುಪಿಸಿದರು. ಅದರಲ್ಲಿ ನಾಲ್ಕು ಮಕ್ಕಳು ಮತ್ತು ಎರಡು ಗಂಡಸರು ಇದ್ದರು. ಎರಡು ಗಂಡಸರೇ ತುಂಬಾ ಕಷ್ಟಪಟ್ಟು ಮಹಿಳೆಯರ ಲಗೇಜ್ ಗಳನ್ನು ಬಸ್ ಗೆ ಹಾಕಿ ಕೊಟ್ಟು ಸಹಕರಿಸಿದ್ದರು. ಇದರ ಮಧ್ಯೆ ಕೆಲವು ವಾಯ್ಸ್, ವಿಡಿಯೋ ಕ್ಲಿಪ್ ಗಳು ಸೋಶಿಯಲ್ ಮೀಡಿಯಾ ಮೂಲಕ ಹರಿದಾಡಿದ ಕಾರಣ ಪ್ರಯಾಣಿಕರು ಸಿಟಿ ವಾಕ್ ಹೋಟೇಲ್ ಗೆ ತೆರಳುತ್ತಿದ್ದ ಮಾಹಿತಿ ಪಡೆದ ಕೆಲ ಯುವಕರು ಹೋಟೇಲ್ ಬಳಿ ಪ್ರಯಾಣಿಕರು ಬಸ್ಸಿನಿಂದಿಳಿದು ಹೋಟೇಲ್ ಗೆ ಹೋಗುವ ಮಧ್ಯೆ ಅವರಿಗೆ ಆಹಾರ,ನೀರು ನೀಡಿದ್ದಾರೆ.
ಪ್ರ: ಎಸ್ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ ರವರು ಬಂದು ಆಹಾರ ವಿತರಿಸಿದರು ಎಂದು ಹೇಳಲಾಗುತ್ತಿದೆ. ಹೌದಾ?
ಉ. ಅತ್ತಾವುಲ್ಲಾ ಜೋಕಟ್ಟೆಯವರು 3.30 ರ ಹೊತ್ತಿಗೆ ಕೃಷ್ಣಾಪುರದ ಅವರ ಪತ್ನಿಯ ಮನೆಯಿಂದ ಪತ್ನಿ ಸಮೇತ ಹೋಟೇಲ್ ಬಳಿ ತೆರಳಿ ಫ್ರೂಟ್ ಮತ್ತು ನೀರು ವಿತರಿಸಿದ್ದರು. ಈ ವಿವರವನ್ನು ಆಗಲೇ ನನಗವರು ತಿಳಿಸಿದ್ದರು. ರಾತ್ರಿ ಹಲವು ಬಾರಿ ನಾವು ವಿಮಾಣ ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ಮಾತಾಡಿದ್ದೆವು.
ಪ್ರ: ಲಾಡ್ಜ್ ವ್ಯವಸ್ಥೆ ಕೂಡ ಸಂಘಟನೆಗಳು ಮಾಡಿಕೊಟ್ಟಿದೆ ಎಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ನಿಜಾಂಶವೇನು?
ಉ. ಇದು ಸುಳ್ಳು ಪ್ರಚಾರ. ಲಾಡ್ಜ್ ವ್ಯವಸ್ಥೆಯಾಗಲಿ ಕ್ವಾರಿಂಟಿನ್ ವ್ಯವಸ್ಥೆಯಾಗಲಿ ಯಾವುದೇ ಸಂಘಟನೆ ಮಾಡಿ ಕೊಡಲು ಅವಕಾಶವಿರಲಿಲ್ಲ. ಅದು ಅರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸೂಚಿಸಿದ ಹೋಟೇಲ್ ಗಳನ್ನೇ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಹಾಗೆಯೇ ಆಗಿದೆ.
ಪ್ರ: ಅಲ್ ಮದೀನಾ ಮತ್ತು ದಾರುಲ್ ಇರ್ಷಾದ್ ಸಂಸ್ಥೆಗಳಲ್ಲಿ ವ್ಯವಸ್ಥೆ ಸರಿ ಇಲ್ಲದ ಕಾರಣ ಪ್ರಯಾಣಿಕರನ್ನು ಕಳುಹಿಸಿಕೊಟ್ಟಿಲ್ಲ ಎಂದು ಹೇಳುತ್ತಾರೆ. ಇದರ ವಾಸ್ತವಾಂಶವೇನು?
ಉ. ಜಿಲ್ಲಾಡಳಿತದಿಂದ ನೋಡೆಲ್ ಆಫೀಸರ್ಸ್/ಆರೋಗ್ಯ ಅಧಿಕಾರಿಗಳು ಅಲ್ಲಿಗೆ ತಪಾಸಣೆಗೆ ಹೋಗಿದ್ದರೆ ತಾನೇ ವ್ಯವಸ್ಥೆ ಸರಿ ಆಗಿಲ್ಲ ಎಂದು ಹೇಳಲು ಸಾಧ್ಯ. ಜಿಲ್ಲಾಡಳಿತವು ನಿನ್ನೆ ತಲುಪಿದ ಪ್ರಯಾಣಿಕರನ್ನು ಈ ಹಾಸ್ಟೆಲ್ ಕ್ವಾರಿಂಟಿನ್ ಗೆ ಕಳುಹಿಸಿಕೊಡಲು ತೀರ್ಮಾನಿಸಿರಲಿಲ್ಲ. ಅದನ್ನು ಜಿಲ್ಲಾಡಳಿತವೇ ತಿಳಿಸಿತ್ತು. ಎಲ್ಲರನ್ನು ಹೋಟೆಲ್ ಗೆ ಕಳುಹಿಸುವ ಬಗ್ಗೆ ತೀರ್ಮಾನವಾಗಿತ್ತು. ಈ ವಿಷಯವನ್ನು ನಿನ್ನೆ ಸಂಜೆ ನಾವು ಎರಡು ಸಂಸ್ಥೆಯ ಮ್ಯಾನೇಜರ್ ಗೆ ತಿಳಿಸಿದ್ದೇವೆ. ವ್ಯವಸ್ಥೆ ಸರಿಯಿರಲಿಲ್ಲ ಎಂಬುದು ಸುಳ್ಳು ಮಾಹಿತಿ.
ಪ್ರ: ಈ ಅವ್ಯವಸ್ಥೆ ಇದು ಹೀಗೆ ಮುಂದುವರಿಯಬಹುದೇ?
ಉ. ಇಲ್ಲ. ಮುಸ್ಲಿಂ ಜಮಾ-ಅತ್ ಪ್ರತಿನಿಧಿಗಳು ಮತ್ತು ಇತರ ಸಂಘಟನೆಯ ನಾಯಕರು ಅಲ್ಲಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆಯಲ್ಲಿದ್ದಾರೆ. ಮುಖ್ಯಮಂತ್ರಿ ಕಛೇರಿಗೂ ವಿಷಯ ತಲುಪಿಸಿದ್ದೇವೆ. ಎಲ್ಲವೂ ಸರಿಯಾಗುವ ಬಗ್ಗೆ ಭರವಸೆಯಿದೆ. ಈಗಾಗಲೇ ಹತ್ತು ವರ್ಷದ ಒಳಗಿನ ಮಕ್ಕಳು, ರೋಗಿಗಳು, ಗರ್ಭಿಣಿಯರು, ವಯೋವೃದ್ದರನ್ನು ಅವರ ವರದಿ ಆದರಿಸಿ ಅವರವರ ಮನೆಯಲ್ಲೇ ಕ್ವಾರಂಟೈನ್ ನಡೆಸಲು ಸರಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಕೊನೆಗೆ?
ದಯವಿಟ್ಟು ಸುಳ್ಳು ಸುದ್ಧಿಗಳನ್ನು ಹರಡುವುದು, ಪರಸ್ಪರ ಮೂದಲಿಸುವುದು. ನಾವು ಮಾತ್ರವೇ ಕೆಲಸ ಮಾಡಿದ್ದು ಇತರರು ಏನೂ ಮಾಡಿಲ್ಲ ಎನ್ನುವಂತೆ ಪರಿಸ್ಥಿತಿಯನ್ನು ವಿಮರ್ಷಿಸುವುದು ಬಿಟ್ಟುಬಿಡಿ. ಇದು ಸಂಘಟನಾ ಪ್ರಚಾರದ ಸಮಯವಲ್ಲ. ಅನಿವಾಸಿಗಳ ಜೊತೆ ನಿಲ್ಲುವುದು ಮುಖ್ಯ. ಒಳ್ಳೆಯ ಕೆಲಸ ಯಾರು ಮಾಡಿದ್ದರೂ ಅದು ಅಭಿನಂದನಾರ್ಹ. ವಿಜೃಂಭಣೆ ಬೇಡ.