ಮಂಗಳೂರು ನಗರದ ವಿವಿಧೆಡೆ ಇದ್ದ ಜಾರ್ಖಂಡ್ ಮೂಲದ ಕಾರ್ಮಿಕರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಊರಿಗೆ ತೆರಳಲು ಸರಕಾರ, ಅಧಿಕಾರಿಗಳು ನೀಡಿದ್ದ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿಧೆಡೆ ಇದ್ದ ಕಾರ್ಮಿಕರು ಒಂದೆಡೆ ಸೇರಿ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದರು.
ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬರುತ್ತಿರುವ ವಿಷಯ ತಿಳಿದು ಮಗಳೂರು ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ & ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ನೇತೃತ್ವದಲ್ಲಿ ವಲಸೆ ಕಾರ್ಮಿಕರಿಗೆ ತುಂಬೆ ಜಂಕ್ಷನ್ ನಲ್ಲಿ ಮೂಸಂಬಿ ಹಣ್ಣುಗಳನ್ನು ವಿತರಿಸಲಾಯಿತು.
ಪಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು, ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಟೆನ್ ಮೈಲ್ ನೇತೃತ್ವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಕಾರ್ಮಿಕರೊಂದಿಗೆ ಬಂಟರ ಭವನದ ವರೆಗೆ ತೆರಳಿದ ಇವರು ತಮ್ಮ ಪ್ರಯಾಣ ಮುಂದುವರಿಸಲು ಮುಂದಾದ ಕಾರ್ಮಿಕರಲ್ಲಿ ಬಂಟರ ಭವನದಲ್ಲಿ ತಾತ್ಕಾಲಿಕವಾಗಿ ಉಳಿಯುವಂತೆ ಪೊಲೀಸರ ಜೊತೆ ಸೇರಿ ಮನವೊಲಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಮಂಗಳೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಹಿಶಾಂ ಫರಂಗಿಪೇಟೆ, ಜಾಬೀರ್ ಪೇರಿಮಾರ್, ಸಲ್ಮಾನ್ ಫಾರೀಶ್, ಫಾಶ್ವತ್ ಫರಂಗಿಪೇಟೆ, ಫಾಝೀಲ್ ಪೇರಿಮಾರ್, ಹಾಗೂ ಪಿ.ಎಫ್.ಐ. ಬಂಟ್ವಾಳ ಮುಖಂಡ ಇರ್ಫಾನ್ ತುಂಬೆ, ಶರೀಫ್ ಕುಂಪನಮಜಲು, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಮೂಸಬ್ಬ ರವರು ಉಪಸ್ಥಿತರಿದ್ದರು.