ಪುತ್ತೂರು: ಲಾಕ್ ಡೌನ್ ಸಮಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಕಾರ್ಯಕರ್ತರಿಗಾಗಿ ಹಲವಾರು ಆನ್ ಲೈನ್ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದೀಗ ಕ್ಯಾಂಪಸ್ ವಿಧ್ಯಾರ್ಥಿಗಳಿಗಾಗಿ ಕ್ಯಾಂಪಸ್ ಹಾಗೂ ವಿಸ್ಡಮ್ ವಿಭಾಗ ಜಂಟಿಯಾಗಿ ಖಿರಾಅತ್, ಹಿಫ್ಲ್, ರಸಪ್ರಶ್ನೆ ಈ ಮೂರು ವಿಷಯಗಳಲ್ಲಿ ತರ್ತೀಲ್-2020 ಎಂಬ ಹೆಸರಿನಲ್ಲಿ ಆನ್ ಲೈನ್ ಖುರ್ ಆನ್ ಸ್ಪರ್ಧೆಗಳು ನಡೆಯುತ್ತಿದೆ.
ಈ ಸ್ಪರ್ಧೆಯು ಡಿವಿಷನ್ ಮಟ್ಟದಲ್ಲಿ ಈಗಾಗಲೇ ಸಂಪೂರ್ಣ ಯಶಸ್ವಿಯೊಂದಿಗೆ ಸಮಾಪ್ತಿಗೊಂಡಿದ್ದು, ದ.ಕ.ಈಸ್ಟ್ ಝೋನ್ ವತಿಯಿಂದ ನಾಳೆ(ಮೇ.14) ನಡೆಯಲಿದೆ ಎಂದು ಈಸ್ಟ್ ಝೋನ್ ಸಮಿತಿ ಅಧ್ಯಕ್ಷರಾದ ಅಯ್ಯೂಬ್ ಮಹ್ ಳರಿ ಕಾವಲಕಟ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.