janadhvani

Kannada Online News Paper

ಖತರ್ ನಿಂದ ಎರಡನೇ ಹಂತದ ಪ್ರಯಾಣ ಮೇ.15ರಿಂದ ಆರಂಭ

ದೋಹಾ: ಮುಂದಿನ ಹದಿನೈದರಿಂದ ಖತರ್‌ನಿಂದ ಭಾರತಕ್ಕೆ ಎರಡನೇ ಹಂತದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಅಲ್ಲಿನ ಭಾರತೀಯ ರಾಯಭಾರಿ ಪಿ.ಕುಮಾರನ್ ಪ್ರಕಟಿಸಿದ್ದಾರೆ. ಈ ಸೇವೆಯು ಭಾರತದ ಹಲವು ರಾಜ್ಯಗಳಿಗೆ ಲಭ್ಯವಿರುತ್ತದೆ. ಕೇರಳಕ್ಕೂ ಒಂದು ಅಥವಾ ಎರಡು ವಿಮಾನಗಳ ಸೇವೆ ಲಭ್ಯವಾಗಲಿವೆ.

ಮೊದಲ ಹಾರಾಟದಲ್ಲಿ, ಗರ್ಭಿಣಿಯರು ಮತ್ತು ವಯೋಸಹಜ ರೋಗಿಗಳಿಗೆ ಹೆಚ್ಚಿನ ಪರಿಗಣನೆಯನ್ನು ನೀಡಲಾಗಿತ್ತು.

ತವರಿಗೆ ಮರಳುವ ಪ್ರಯಾಣಕ್ಕಾಗಿ ಈಗಾಗಲೇ ನಲವತ್ತನಾಲ್ಕು ಸಾವಿರ ಮಂದಿ ನೋಂದಾಯಿ ಸಿದ್ದಾರೆ ಎನ್ನಲಾಗಿದೆ. ಇವುಗಳಲ್ಲಿ ಅತ್ಯಂತ ಅರ್ಹರನ್ನು ಊರಿಗೆ ಕಳುಹಿಸಲಾಗುತ್ತದೆ. ಕ್ಷಮಾದಾನ ಪಡೆದ ನಂತರ ಜೈಲಿನಿಂದ ಬಿಡುಗಡೆಯಾದ 70 ಜನರು ಮತ್ತು ಗಡೀಪಾರು ಕೇಂದ್ರದಲ್ಲಿರುವ 200 ಮಂದಿ ನೋಂದಾಯಿಸಿದವರ ಪಟ್ಟಿಯಲ್ಲಿ ಸೇರಿದ್ದಾರೆ.

ಇವರನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು.ಅದೇ ರೀತಿ ಮನೆಕೆಲಸದ ಅನೇಕ ಮಹಿಳೆಯರು ಕೂಡ ಪ್ರಯಾಣಕ್ಕಾಗಿ ನೋಂದಾಯಿಸಿಕೊಂಡಿದ್ದು, ಇವರನ್ನು ಕೂಡ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ರಾಯಭಾರಿ ತಿಳಿಸಿದರು.