ಸಾಂಕ್ರಾಮಿಕ ರೋಗವನ್ನು ಜಗತ್ತಿನಿಂದ ಹೋಗಲಾಡಿಸುವಂತೆ ದೇವರನ್ನು ಪ್ರಾರ್ಥಿಸಲು ಮತ್ತು ಸೋಂಕಿನಿಂದ ಬಳಲಿರುವ ಎಲ್ಲ ವ್ಯಕ್ತಿಗಳಿಗೆ ಗುಣಮುಖವಾಗುವ ಲಸಿಕೆ ಲಭ್ಯವಾಗುವಂತೆ ಮೇ 14 ರಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಹಾಗೂ ರಮಝಾನ್ ಉಪವಾಸ ವ್ರತ ಆಚರಿಸುವಂತೆ ಪೋಪ್ ಫ್ರಾನ್ಸಿಸ್ ಎಲ್ಲಾ ಧರ್ಮದ ಅನುಯಾಯಿಗಳಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ, “ಎಲ್ಲಾ ಧರ್ಮಗಳ ವಿಶ್ವಾಸಿಗಳು ಮೇ 14 ರಂದು ಪ್ರಾರ್ಥನೆ ಮತ್ತು ಉಪವಾಸ ವ್ರತವನ್ನು ಆಚರಿಸುವ ಮೂಲಕ ಆಧ್ಯಾತ್ಮಿಕವಾಗಿ ಒಂದಾಗಬೇಕು, ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಗಡಿ, ಭಾಷೆ,ಸಂಸ್ಕೃತಿಯನ್ನು ದಾಟಿದ್ದು, ಇದರಿಂದ ಹೊರಬರಲು ಮಾನವೀಯತೆಗೆ ಸಹಾಯ ಮಾಡುವಂತೆ ದೇವರನ್ನು ಬೇಡಿಕೊಳ್ಳಬೇಕು” ಎಂಬ ಕರೆಗೆ ಪೋಪ್ ಫ್ರಾನ್ಸಿಸ್ ಅನುಮೋದನೆ ನೀಡಿದರು.
ಉನ್ನತ ಮಟ್ಟದ ಪರಸ್ಪರ ಸಂಬಂಧದ ಗುಂಪಾದ ಮಾನವ ಭ್ರಾತೃತ್ವದ ಉನ್ನತ ಸಮಿತಿಯು ಮುಂದಿನ ಮೇ 14 ರಂದು ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯಲು ವಿಶ್ವ ಪ್ರಾರ್ಥನಾ ದಿನವನ್ನು ಆಯೋಜಿಸಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.