ನವದೆಹಲಿ: ಲಾಕ್ಡೌನ್ ಅವಧಿ ವೇಳೆ ಜನರು ಬ್ಯಾಂಕ್ಗೆ ಬರುವುದನ್ನು ತಡೆಯಲು ಭಾರತೀಯ ಬ್ಯಾಂಕ್ಗಳ ಸಂಘ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮವು ಇಂದಿನಿಂದಲೇ ಜಾರಿಗೆ ಬರಲಿದೆ.
ಹೊಸ ನಿಯಮದ ಅಡಿಯಲ್ಲಿ ಎಲ್ಲರಿಗೂ ಹಣ ತೆಗೆಯಲು ಅವಕಾಶ ಇರುವುದಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ ಕೊನೆಯಲ್ಲಿ 0 ಅಥವಾ 1 ಇದ್ದರೆ ಅವರು ಮೇ 4ರಂದು ಬ್ಯಾಂಕ್ನಲ್ಲಿ ಹಣ ತೆಗೆಯಬಹುದು. 2 ಮತ್ತು 3 ನಂಬರ್ ಇದ್ದರೆ ಮೇ 5ರಂದು ಹಣ ತೆಗೆಯಬಹುದು. 4 ಮತ್ತು 5 ಸಂಖ್ಯೆ ಇದ್ದರೆ ಮೇ 6ರಂದು ಹಣ ತೆಗೆಯಬಹುದು.
ಇನ್ನು, ಬ್ಯಾಂಕ್ ಖಾತೆಯ ಕೊನೆಯಲ್ಲಿ 6 ಮತ್ತು 7 ಸಂಖ್ಯೆ ಹೊಂದಿರುವವರು ಮೇ 8ರಂದು ಹಣ ತೆಗೆಯಬಹುದು. 8 ಸಂಖ್ಯೆ ಮೇ 9ರಂದು ಹಾಗೂ 9 ನಂಬರ್ ಹೊಂದಿರುವವರು ಮೇ 11ರಂದು ಹಣ ತೆಗೆಯಬಹುದಾಗಿದೆ.
ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆನ್ಲೈನ್ ಪೇಮೆಂಟ್ಗೆ ಹೆಚ್ಚು ಒತ್ತು ನೀಡುವಂತೆ ಸರ್ಕಾರ ಕೇಳಿದೆ. ಇದರ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮೇ 12ರ ನಂತರ ಎಲ್ಲರೂ ಬ್ಯಾಂಕ್ಗೆ ತೆರಳಿ ಹಣ ತೆಗೆಯಬಹುದಾಗಿದೆ.






