ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ವತಿಯಿಂದ ಒಂದು ಕೋಟಿ ಮೌಲ್ಯದ ದಿನಸಿ ವಿತರಣೆ ಸುಳ್ಯದ ತಾಲೂಕಿನಾದ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಇರುವ ಅರ್ಹರನ್ನು ಗುರುತಿಸಿ ಆಹಾರ ಧಾನ್ಯ ಕಿಟ್ ಹಾಗೂ ತರಕಾರಿ ಮಾಂಸಗಳನ್ನು ಒಳಗೊಂಡ ಪ್ರಥಮ ಹಂತದ ವಿತರಣೆಯನ್ನು ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಅವರ ನೇತೃತ್ವದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಎಸ್ ವೈಎಸ್ ನಾಯಕರಾದ ಹಮೀದ್ ಬೀಜ ಕೊಚ್ಚಿ ತಾಜುದ್ದೀನ್ ಸಖಾಫಿ ಮೊಗರ್ಪಣೆ, ಹಸೈನಾರ್ ಜಯನಗರ, ಸಿದ್ದೀಕ್ ಕಟ್ಟೆ ಕಾರ್ಸ್, ಸಮೀರ್ ಮೊಗರ್ಪಣೆ ಮುಸ್ತಫ , ಎಸ್ಎಸ್ಎಫ್ ಸುಳ್ಯ ಡಿವಿಷನ್ ನಾಯಕರಾದ ನೌಶಾದ್ ಕೆರೆಮೂಲೆ , ಸೆಮೀರ್ ಡಿಎಚ್ , ರಶೀದ್ ಕೆರೆಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.