ಜಗತ್ತೇ ಇಂದು ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಟದಲ್ಲಿದ್ದರೆ, ಕೆಲವು ‘ಮಾನವರು’ ಲಾಕ್ಡೌನ್ ನಿಂದ ಹೊಟ್ಟೆಗೆ ಹಿಟ್ಟು ಇಲ್ಲದೆ ಬಲಳುತ್ತಿರುವವರ ಹಸಿವು ನೀಗಿಸುವ ಹೋರಾಟದಲ್ಲಿದ್ದಾರೆ.
ಅಂತಹ ಸಮಾಜ ಸೇವಕರಲ್ಲಿ ಅನೇಕರು ಈ ಸಮಾಜದ ಮನ ಸೆಳೆದಿದ್ದಾರೆ. ಅದರಲ್ಲೊಬ್ಬ ಮಂಗಳೂರಿನ ಯುವಕ ಪ್ರೀಮಸ್ ಮೇರಿಯೋ ಡಿಸೋಜಾ NSUI ಸಂಘದ ಯುವಕನಾಗಿದ್ದು ತನ್ನ ಗೆಳೆಯ ಅಲ್ಫಾಝ್ ಬಜಾಲ್ ನೊಂದಿಗೆ ಸೇರಿ ರೇಷನ್ ಕಿಟ್ ಕೊಡಲು ಮಂಗಳೂರಿನ ಮೂಲೆ ಮೂಲೆ ತಲುಪಿದವರು, ಮಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಅವಶ್ಯಕತೆ ಮನಗಂಡು ಅವರಿಗೆ ಹೊತ್ತಿನ ಊಟದ ವ್ಯವಸ್ಥೆ ಮಾಡಿದರು.
ಪ್ರೀಮಸ್ ತನ್ನ ತಂದೆಯ ಪ್ರಿನ್ಸ್ ಕ್ಯಾಟ್ರಿಂಗ್ ಸಹಯೋಗದೊಂದಿಗೆ ಊಟ ತಯಾರಿಸಿ ಹಸಿದು ನೊಂದ ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಮಂಗಳೂರಿನಲ್ಲಿ ಯಾರೂ ಮಾಡದಂತಹ ಸಮಾಜ ಸೇವೆ ಇಂದು ಇಬ್ಬರು ಯುವಕರು ಮಾಡುತಿದ್ದಾರೆ ಸುಮಾರು 500 ವಲಸೆ ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡುತ್ತಾ ಮಂಗಳೂರಿನ ಹೀರೋ ಆಗುತಿದ್ದಾರೆ.
ಪ್ರೀಮಸ್ ರವರ ಈ ಸೇವೆ ನಿಜವಾಗಿಯೂ ಶ್ಲಾಘನೀಯ, ಮನೆಯಲ್ಲಿ ಕುಳಿತು ಸುಮ್ಮನೆ ಮೊಬೈಲ್ ನಲ್ಲಿ ಹರಟೆ ಹೊಡಿಯುವ ಯುವಕರಿಗೆ ಮಾದರಿ ಅಲ್ಫಾಝ್ & ಪ್ರೀಮಸ್ ಟೀಂ.
ಗೆಳೆಯ ಪ್ರೀಮಸ್ ತಮಗೆ ಮನದಾಳದಿಂದ ಮಂಗಳೂರಿಗರ ಪರವಾಗಿ ಧನ್ಯವಾದಗಳು.
ಹ್ಯಾಟ್ಸಾಫ್ ಗೆಳೆಯ. ಇನ್ನೂ ಹಲವಾರು ಸೇವೆಗಳು ಮಾಡಿ ಜನರ ಮನಸ್ಸಿನ ನಾಯಕರಾಗಿ ಎಂದು ಆಶಿಸುತ್ತೇನೆ.
✍🏼 Razeen Bajal
Very good
Proud of you….. Guys…. 👍God bless you.