janadhvani

Kannada Online News Paper

ಕೋವಿಡ್’19: ವಿಸಿಟ್ ವಿಸಾ ನವೀಕರಿಸದೆ ಖತರ್ ನಲ್ಲಿ ಉಳಿಯಬಹುದು

ದೋಹಾ: ಖತರ್‌ಗೆ ವಿಸಿಟ್ ವಿಸಾದಲ್ಲಿ ಬಂದು ಮರಳಲು ಸಾಧ್ಯವಾಗದವರಿಗೆ ಸರಕಾರ ಪರಿಹಾರ ಘೋಷಿಸಿದೆ. ಸಂದರ್ಶಕರು ತಮ್ಮ ವೀಸಾವನ್ನು ನವೀಕರಿಸದೆಯೇ ಆನ್ ಅರೈವಲ್ ಮತ್ತು ಪ್ರವಾಸಿ ವೀಸಾದಲ್ಲಿ ದೇಶದಲ್ಲಿ ಉಳಿಯಬಹುದು.

ಪ್ರಸಕ್ತ ನಿಯಮಗಳು ಇರುವವರೆಗೂ ಅವರಿಗೆ ದೇಶದಲ್ಲಿ ಉಳಿಯಲು ಅವಕಾಶವಿದೆ. ವಿಮಾನ ಸಂಚಾರ ಪ್ರಾರಂಭಗೊಂಡ ಕೂಡಲೇ ಯಾವುದೇ ಅಡೆತಡೆಗಳಿಲ್ಲದೆ ತಮ್ಮ ದೇಶಗಳಿಗೆ ಮರಳಬಹುದು ಎಂದು ಖತರ್ ಗೃಹ ಸಚಿವಾಲಯ ತಿಳಿಸಿದೆ

ಆದಾಗ್ಯೂ, ಮೂರು ತಿಂಗಳವರೆಗೆ ಉಳಿಯಬಹುದಾದ ಕುಟುಂಬ ಭೇಟಿ ಮತ್ತು ವ್ಯವಹಾರ ಭೇಟಿ ವಿಸಾಗಳಿಗೆ ಇದು ಅನ್ವಯಿಸುವುದಿಲ್ಲ. ಈ ವೀಸಾಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಗೃಹ ಸಚಿವಾಲಯದ ವೆಬ್‌ಸೈಟ್ ಅವಕಾಶ ನೀಡುತ್ತದೆ.