janadhvani

Kannada Online News Paper

ಆದಾಯವಿಲ್ಲದ ಜಮಾಅತ್ ಕಮಿಟಿಯನ್ನು ತರಾಟೆಗೆ ತೆಗೆದುಕೊಳ್ಳುವುದು ಶೋಭೆಯಲ್ಲ!

ಹೌದು.. ಈ ಲಾಕ್ ಡೌನ್ ಸಮಯದಲ್ಲಿ ಕೆಲವು ಅದಾಯ ಮೂಲಗಳನ್ನು ಹೊಂದಿರುವ ಜಮಾತಿಗರ ಕಾರ್ಯವೈಕರಿಯು ಪ್ರಸಂಶಾರ್ಹ ಎಂಬುವುರದಲ್ಲಿ ಸಂಶಯವಿಲ್ಲ. ಹಾಗಂತ ಊರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದ ಜಮಾಅತ್’ಗಳನ್ನು ಪ್ರಶ್ನಿಸುವುದು ಸರಿಯಲ್ಲ.
ನಾನು ತಿಳಿದ ಮಟ್ಟಿಗೆ ಕರಾವಳಿಯ ಬಹುತೇಕ ಮಸೀದಿಗಳು ಅಲ್ಲಿನ ಜಮಾಅತಿಗರ ವಂತಿಗೆ ಹಣದಿಂದ ನಡೆಯುತ್ತದೆ ಹೊರತು ಯಾವುದೇ ಹೂರಗಿನ ಫಂಡ್’ನಿಂದ ಅಲ್ಲ.

ಕೆಲವು ಮಸೀದಿಗಳಿಗೆ ಆದಾಯದ ಮೂಲಗಳೇ ಇಲ್ಲ, ಆ ಜಮಾತಿನ ಬಡವರ ಬೆವರ ಹನಿಯೇ ಅಲ್ಲಿನ ಜಮಾತಿನ ಪ್ರಮುಖ ಆದಾಯ. ಈ ಲಾಕ್ ಡೌನ್ ಸಂದರ್ಭದಲ್ಲಿ ಜಮಾತಿನ ಉಸ್ತಾದರಿಗೆ (ನಾಲ್ಕು ಉಸ್ತಾದರಿಗೆ) ಕನಿಷ್ಠ ವೇತನ ಅಂದರೂ ಅರವತ್ತು ಸಾವಿರ ಬೇಕಾಗುತ್ತದೆ. ಇದಲ್ಲದೆ ಕರೆಂಟ್ ಬಿಲ್ ಇನ್ನಿತರ ಖರ್ಚುಗಳನ್ನು ಕೂಡ ಭರಿಸಬೇಕು. ಹಾಗಾಗಿ ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ಆರ್ಟಿಕಲ್ ಬರೆದು ಯಾವುದೇ ಜಮಾಅತ್ ಕಮಿಟಿಗಳನ್ನು ಶಪಿಸದಿರಿ.

ಜಮಾಅತಿಗೆ ಬೇಕಾದಷ್ಟು ಆದಾಯ ಇದ್ದು ಕೂಡ ಅದನ್ನು ಇಂತಹ ಸಂಧರ್ಭದಲ್ಲಿ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸದಿದ್ದರೆ ಅಂತಹ ಕಮಿಟಿಯನ್ನು ಊರಿನವರೇ ಪ್ರಶ್ನಿಸಿ ಪರಿಹಾರ ಒದಗಿಸುವಂತೆ ಒತ್ತಡ ಹೇರಬೇಕು.‌

ಅದು ಬಿಟ್ಟು ಕಮಿಟಿಗೆ ಬರುವ ಆದಾಯದ, ಖರ್ಚು ವೆಚ್ಚಗಳ ಲೆಕ್ಕ ಗೊತ್ತಿಲ್ಲದೆ ತೋಚಿದ್ದನ್ನೆಲ್ಲಾ ಗೀಚಿ ಶೇರು ಮಾಡುವ ಬದಲು ಊರಿಗೆ ತನ್ನಿಂದ ಏನಾದರೂ ಸಹಾಯ ಒದಗಿಸಲು ಸಾಧ್ಯವಾಗುವುದಾದರೆ ಅಂತಹ ಕೆಲಸಗಳತ್ತ ಹೆಚ್ಚಿನ ಮಹತ್ವ ಕೊಟ್ಟು ಊರಿನ ಕಷ್ಟಗಳಿಗೆ ನೆರವಾಗಬೇಕು.
-# ಹಸೈನಾರ್ ಮೊಂಟೆಪದವು

error: Content is protected !! Not allowed copy content from janadhvani.com