ಬೆಂಗಳೂರು,ಏ.14: ದೇಶದಲ್ಲಿ ಲಾಕ್ಡೌನ್ ವಿಸ್ತರಣೆಯಾಗಿರುವುದರಿಂದ ಬೆಂಗಳೂರು ಸೇರಿದಂತೆ ಕೊರೊನಾ ಸೋಂಕಿರುವ ಜಿಲ್ಲೆಗಳಲ್ಲಿ ಮತ್ತಷ್ಟು ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಟ್ ಸ್ಪಾಟ್ ಗಳಲ್ಲಿ ಬಿಗಿ ಲಾಕ್ ಡೌನ್ ಮಾಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಎರಡು ಏರಿಯಾಗಳಲ್ಲಿ ಸೀಲ್ ಡೌನ್ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು ಬೆಂಗಳೂರಿನಲ್ಲಿ ಮತ್ತಷ್ಟು ಕ್ರಮ ಬಿಗಿಯಾಲಿದೆ. ಏ.20 ರವರೆಗೆ ಜಿಲ್ಲಾಡಳಿತದ ಜೊತೆ ಚರ್ಚಿಸುತ್ತೇವೆ. ನಂತರ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿರು.ಕೇಂದ್ರ ಮೈಕ್ರೋಮ್ಯಾನೇಜ್ ಮೆಂಟ್ ವರೆಗೆ ಹೋಗಲಿದೆ.
ವಿಶೇಷವಾಗಿ ಯಾವ ಜಿಲ್ಲೆಗಳಲ್ಲಿ ಹೆಚ್ಚಿದೆ ಅಲ್ಲಿ ನಿರ್ಭಂದ ಇರುತ್ತದೆ. ರಾಜ್ಯದ ಬೀದರ್, ಕಲಬುರಗಿ, ಮೈಸೂರು ಗಳಲ್ಲಿ ಪ್ರಕರಣ ಹೆಚ್ಚಿದೆ. ಅಂತಹ ಕಡೆ ಒಬ್ಬೊಬ್ಬ ಎಡಿಜಿಪಿಗಳನ್ನ ಹಾಕ್ತೇವೆ. ಅಲ್ಲಿ ಮತ್ತಷ್ಟು ನಿಗಾ ಇಡ್ತೇವೆ. ಮತ್ತಷ್ಟು ಓಡಾಟ ನಿರ್ಭಂದ ಹಾಗೂ ಕಡಿವಾಣ ಹಾಕ್ತೇವೆ ಎಂದರು.
ಈಗಿರುವ ಭದ್ರತೆ ಗಿಂತ ಮತ್ತಷ್ಟು ಭದ್ರತೆ ಹೆಚ್ಚು ಮಾಡ್ತೇವೆ. ಮತ್ತಷ್ಟು ಬ್ಯಾರಿಕೇಡ್ ಗಳನ್ನು ಹಾಕಲಾಗುವುದು. ಅಲ್ಲದೆ, ಮತ್ತಷ್ಟು ಚೆಕ್ಕಿಂಗ್ ಮಾಡಿ, ವಾಹನಗಳ ನಿರ್ಬಂಧ ಹೇರುತ್ತೇವೆ ಎಂದು ತಿಳಿಸಿದರು.ಈಗಾಗಲೇ 57 ಸಾವಿರ ವಾಹನ ಸೀಜ್ ಮಾಡಲಾಗಿದೆ. ಒಂದು ವೇಳೆ ಮತ್ತೆ ಮತ್ತೆ ಓಡಾಡಿದ್ರೆ ಮತ್ತಷ್ಟು ವಾಹನ ಗಳನ್ನು ಸೀಜ್ ಮಾಡುತ್ತೇವೆ.ಸಾರ್ವಜನಿಕರ ಓಡಾಟದ ಸಮಯವನ್ನು ಕಡಿತಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಅನಾವಶ್ಯಕವಾಗಿ ಓಡಾಟಲು ನಿರ್ಬಂಧ ಹೇರುತ್ತೇವೆ. ಸಮಯ ನಿರ್ಬಂಧ ಮಾಡ್ತೇವೆ. ಸಾರ್ವಜನಿಕರ ಓಡಾಟದ ಸಮಯವನ್ನು ಕಡಿಮೆ ಮಾಡ್ತೇವೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಾಗಿರುವ ಬೀದರ್,ಕಲಬುರಗಿ,ಮೈಸೂರು ಜಿಲ್ಲೆಗಳಲ್ಲಿ ಇನ್ನಷ್ಟು ಬಿಗಿಕ್ರಮ ಕೈಗೊಂಡು ಆ ಜಿಲ್ಲೆಗಳಲ್ಲಿ ಒಬ್ಬೊಬ್ಬ ಎಡಿಜಿಪಿಗಳನ್ನು ನೇಮಿಸಿ ಮತ್ತಷ್ಟು ನಿಗಾ ವಹಿಸಲಾಗುವುದು.ಜನರ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.