janadhvani

Kannada Online News Paper

ಆಹಾರ ಸಾಮಗ್ರಿಗೆ ಕೊರತೆಯಿಲ್ಲ, ಬೆಲೆಯೇರಿಕೆಗೆ ಕಠಿಣ ಶಿಕ್ಷೆ- ಖತರ್ ಕೈಗಾರಿಕಾ ಸಚಿವ

ದೋಹಾ: ಖತರ್‌ನಲ್ಲಿ ಕೋವಿಡ್ ನಿಯಂತ್ರಣದಿಂದಾಗಿ ಆಹಾರ ಸಾಮಗ್ರಿಗಳಿಗೆ ಕೊರತೆ ಉಂಟಾಗದು ಎಂದು ಕೈಗಾರಿಕಾ ಸಚಿವ ಅಲಿ ಬಿನ್ ಅಹ್ಮದ್ ಅಲ್-ಕುವಾರಿ ಹೇಳಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಸಬಹುದಾದ ಅಗತ್ಯ ವಸ್ತುಗಳ ಸಂಗ್ರಹ ದೇಶದಲ್ಲಿದೆ. ಆಹಾರ ಸೇರಿದಂತೆ ಆಮದು ಮತ್ತು ಸಂಗ್ರಹಣೆ ಸ್ಥಿರವಾಗಿ ಮುಂದುವರಿಯುತ್ತದೆ. ದೇಶದ ಶೇಖರಣಾ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಮುದ್ರ ಮೂಲಕ ಆಮದು ಅಡತಡೆ ಇಲ್ಲದೆ ಮುಂದುವರಿಯುತ್ತಿರುವುದು ಸಮಾಧಾನಕರವಾಗಿದೆ. ವಾಣಿಜ್ಯ ಸಂಸ್ಥೆಗಳು ಜನರಿಗೆ ಯಾವುದೇ ತೊಂದರೆಗಳಿಲ್ಲದೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಲಭಿಸುವಂತೆ ನೋಡಿಕೊಳ್ಳಬೇಕು.

ವ್ಯಾಪಾರಿಗಳು ಪ್ರಸಕ್ತ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಅತಿಯಾದ ಬೆಲೆ ಅಥವಾ ಸಂಗ್ರಹಣೆ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com