janadhvani

Kannada Online News Paper


ಪಾವನ ತಿಂಗಳ ಪುಣ್ಯ ಬರಾಅತ್
ಬಂದೇ ಬಿಟ್ಟಿತು ನಮ್ಮೆಡೆಗೆ
ಮುಂದಿನ ವರುಷದ ಲೆಕ್ಕಾಚಾರವ
ಮಂಡಿಸ ಬಂತು ಜನರೆಡೆಗೆ

ಕೊರೋನದಿಂದ ಖಿನ್ನತೆ ಹೊಂದಿದ
ಮೈಮನಗಳನು ಒಂದಿನಿತು
ತಣಿಸಲಿ ಪುಣ್ಯ ಬರಾಅತ್ ಬಂದು
ಅಲ್ಲಾಹ್ ನೀನು ಅನುಗ್ರಹಿಸು

ಮುಕ್ತಿಯ ರಾತ್ರಿ ನಲ್ಮೆಯ ರಾತ್ರಿ
ಪ್ರಾರ್ಥನೆಗುತ್ತರ ದೊರೆಯುವುದು
ವಿಶ್ವಾಸಿಗಳೇ ಬೇಡುವ ನಾವು
ವಿಶ್ರಮವಿಲ್ಲದೆ ಹಗಲಿರುಳು

ಬರಾಅತ್ ರಾತ್ರಿಯ ಬರ್ಕತ್ತಿನಲಿ
ಬವಣೆಗಳೆಲ್ಲಾ ತೊಲಗುತಲೀ,
ಕೊರೋನವೇನೋ ಕೊಚ್ಚೇ ಹೋಗಲಿ
ರಮಳಾನ್ ತಿಂಗಳ ಬರವಿನಲೀ

ಆಹಾರ ಆಯುಷ್ಯ ಉಳಿದಂತೆಲ್ಲವು
ಹಂಚಿಕೆಯಾಗುವ ರಾತ್ರಿಯಿದು
ಅಲ್ಲಾಹ್ ನಮ್ಮಲಿ ಕರುಣೆಯ ತೋರಿ
ಒಳಿತಿನ ಬದುಕಿಗೆ ಕೃಪೆ ನೀಡು…..

✍🏻 ಉಮ್ಮು ನಬ್‌ಲ ಜಿ.ಯಂ