janadhvani

Kannada Online News Paper

ಸೌದಿ: ದೇಶ ತೊರೆಯದೆ ಮಲ್ಟಿಪಲ್ ವೀಸಾ ನವೀಕರಣಕ್ಕೆ ಅನುಮೋದನೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರವಾಸಿ ವೀಸಾಗಳ ನವೀಕರಣ ಕ್ರಮವು ಜಾರಿಗೆ ಬಂದಿದೆ. ಆರೋಗ್ಯ ವಿಮೆ ಮತ್ತು ವೀಸಾ ಶುಲ್ಕವನ್ನು ಪಾವತಿಸಿದವರು ಅಬ್ಶೀರ್ ಪೋರ್ಟಲ್‌ ಮೂಲಕ ನವೀಕರಿಸಬಹುದು. ಈ ಕ್ರಮವು ವಿದೇಶಿಯರಿಗೆ ವರದಾನವಾಗಿದೆ.

ಒಂದು ವರ್ಷದ ಮಲ್ಟಿಪಲ್ ವೀಸಾ ಹೊಂದಿರುವವರು ದೇಶವನ್ನು ತೊರೆಯದೆ ವೀಸಾ ನವೀಕರಣ ಮಾಡುವ ಕಾರ್ಯ ವಿಧಾನಗಳು ಈಗ ಜಾರಿಯಲ್ಲಿವೆ. ಪ್ರಸಕ್ತ ನಿಯಮಗಳ ಪ್ರಕಾರ, 6 ರಿಂದ ಒಂಬತ್ತು ತಿಂಗಳವರೆಗೆ ವೀಸಾ ನವೀಕರಣಕ್ಕೆ ದೇಶ ತೊರೆದು ಮರಳಿ ಬರುವುದು ಕಡ್ಡಾಯವಾಗಿತ್ತು. ಆದರೆ ಕೋವಿಡ್ 19 ಕಾಯಿಲೆಯ ಹಿನ್ನೆಲೆಯಲ್ಲಿ, ಅನೇಕ ವಿದೇಶಿಯರು ವೀಸಾವನ್ನು ನವೀಕರಿಸಲು ಹೆಣಗಾಡಿದ್ದಾರೆ. ಕಾರಣ ಅಲ್ಲಿ ಅಂತರ್‌ರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ದೇಶದ ಗಡಿಗಳನ್ನು ಬಂದ್ ಮಾಡಲಾಗಿದೆ ಮತ್ತು ಪ್ರಯಾಣ ನಿಷೇಧವನ್ನು ವಿಧಿಸಲಾಗಿದೆ.

ಈ ಸನ್ನಿವೇಶದಲ್ಲಿ ಸೌದಿ ಪಾಸ್‌ಪೋರ್ಟ್ ಇಲಾಖೆಯು ಅಬ್ಷೀರ್ ಆನ್‌ಲೈನ್ ಪೋರ್ಟಲ್ ಮೂಲಕ ಬಹು ಸಂದರ್ಶಕರ ವೀಸಾಗಳನ್ನು ನವೀಕರಿಸಲು ಅನುಮೋದನೆ ನೀಡಿದೆ. ಆರೋಗ್ಯ ವಿಮೆ ಆನ್‌ಲೈನ್ ಮೂಲಕ ನವೀಕರಿಸಿದ ನಂತರ, ಮೂರು ತಿಂಗಳ ವೀಸಾ ಶುಲ್ಕವಾಗಿ 100 ರಿಯಾಲ್ ಪಾವತಿಸಬೇಕು. ನಂತರ ಅಬ್ಶೀರ್ ಮೂಲಕ ಮೂರು ತಿಂಗಳ ಕಾಲ ವೀಸಾ ನವೀಕರಣ ಮಾಡಬಹುದಾಗಿದೆ. ವೀಸಾ ಅವಧಿ ಮುಗಿಯುವ ಏಳು ದಿನಗಳ ಮೊದಲು ಮತ್ತು ಮುಕ್ತಾಯ ದಿನಾಂಕ ಬಳಿಕ ಮೂರು ದಿನಗಳವರೆಗೆ ವೀಸಾ ನವೀಕರಣಗಳನ್ನು ಅನುಮತಿಸಲಾಗಿದೆ.

error: Content is protected !! Not allowed copy content from janadhvani.com