“ವಿಕೃತೋದ್ಯಮ ನಿಲ್ಲಿಸಿ” ಕೋಮುವಾದಿ ಮಾಧ್ಯಮ ವಿರುದ್ಧ ಮುಸ್ಲಿಮ್ ಜಮಾಅತ್ ಗರಮ್

ಬೆಂಗಳೂರು: ಕೊರೋನಾ ವಿಶ್ವದಾದ್ಯಂತ ವ್ಯಾಪಿಸಿದೆ. ಮನುಷ್ಯನ ಧರ್ಮ ನೋಡಿ ಈ ವ್ಯಾಧಿ ಹರಡುತ್ತಿಲ್ಲ.ಧರ್ಮ, ವರ್ಗ, ವರ್ಣದವರಲ್ಲೂ ಈ ರೋಗ ಕಂಡು ಬಂದಿದೆ. ವಿಚಿತ್ರವೆಂದರೆ, ಕನ್ನಡ ಪತ್ರಿಕೋದ್ಯಮದ  ಕೆಲವರ ಕೋಮು ಮನಸ್ಥಿತಿ  ಈ ಕೊರೋನಾವನ್ನು  ಕೋಮುವಾದೀಕರಣ ಮಾಡಲು ಹೊರಟಿದೆ.

“ಸತ್ತವರೆಲ್ಲಾ ಒಂದೇ ಸಮುದಾಯದವರು” ಎಂಬ ಮುಖಪುಟ ವರದಿಯನ್ನು ಪ್ರಕಟಿಸಿರುವ ಕನ್ನಡದ ಪ್ರಮುಖ ಪತ್ರಿಕೆಯೊಂದು ಈ ವೈರಸ್ ಕರ್ನಾಟಕದಲ್ಲಿ ಯಾವ ಧರ್ಮದವರಲ್ಲಿ ಹೆಚ್ಚು ಬಂದಿದೆ. ಯಾವ ಧರ್ಮದವರು ಹೆಚ್ಚು ಸತ್ತಿದ್ದಾರೆ, ಯಾವ ಧರ್ಮದವರಿಗೆ ಪೊಲೀಸರು ಹೆಚ್ಚು ಪೆಟ್ಟು ಕೊಟ್ಟಿದ್ದಾರೆ ಎನ್ನುವ ಸುದ್ದಿಯೊಂದಿಗೆ ನಿಕೃತ ಮನೋಭಾವವನ್ನು ಪ್ರದರ್ಶಿಸಿದೆ, “ಕೊಮೊನಾ ಹರಡಿ” ಎಂದು ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದ ಕಿಡಿಗೇಡಿಯೊಬ್ಬನ ನೀಚ ಕೃತ್ಯವನ್ನೂ ಈ ವರದಿಯೊಂದಿಗೆ ಜೋಡಿಸಿ ಇತರ ಸಮುದಾಯಗಳ ನಡುವೆ ಮುಸ್ಲಿಂ ಸಮುದಾಯವನ್ನು ತಪ್ಪಿತಸ್ಥ ವಿಭಾಗವನ್ನಾಗಿ ಚಿತ್ರೀಕರಿಸುವ ಪ್ರಯತ್ನವೂ ನಡೆದಿದೆ.

ಮನುಷ್ಯ ವರ್ಗದ ಭಾವುಕ ಕ್ಷಣಗಳನ್ನು ಸೂಕ್ಷ್ಮ ಸಂವೇದನೆಗಳನ್ನು ಕೋಮು ವೈಷಮ್ಮಕ್ಕೆ ತಿರುಗಿಸುವ ಈ ಹೀನ ಕೃತ್ಯ ಖಂಡನೀಯ.ಇದು ಅಮಾನವೀಯ ಮತ್ತು ಪತ್ರಿಕಾ ಧರ್ಮಕ್ಕೆ ವಿರುದ್ಧ ಎಂದು ಕರ್ನಾಟಕ ಮುಸ್ಲಿಂ ಜಮಾ ಅತ್ ಅಭಿಪ್ರಾಯ ಪಟ್ಟಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಇಡೀ ಮುಸ್ಲಿಮ್ ಸಮುದಾಯ ಭಾಗಿಯಾಗಿದೆ. ಚರಿತ್ರೆಯಲ್ಲೇ ಮೊದಲ ಬಾರಿಗೆ ಮುಸ್ಲಿಮರು ಮಸೀದಿಯಲ್ಲಿ ನಮಾಝ್ ನಿಲ್ಲಿಸಿದ್ದಾರೆ.ಇಂತಹ ಸಂದರ್ಭದಲ್ಲಿ ಮುಸ್ಲಿಮರು ನಮಾಝ್ ಮಾಡಲು ಮಸೀದಿಗೆ ಹೋಗಬೇಕಾಗಿಲ್ಲ ಎಂಬ ಫತ್ವಾವನ್ನು ಸಮುದಾಯದ ಮಧ್ಯೆ ಬಿತ್ತರಿಸಲು ಮುಸ್ಲಿಮ್ ಪಂಡಿತರಿಗೆ ಸಾಧ್ಯವಾಗಿದೆ.ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಮುಸ್ಲಿಮರ ಈ ಹೋರಾಟವನ್ನು ಶ್ಲಾಘಿಸಿದ್ದಾರೆ.

ಇಂದು ತುರ್ತಾಗಿ ವಿಡಿಯೊ ಕಾನ್ಫರನ್ಸ್ ನಡೆಸಿದ  ಮುಸ್ಲಿಂ ಜಮಾಅತ್ ರಾಜ್ಯ ಸೆಕ್ರಟರಿಯೇಟ್  ಈ ವರದಿ ಮತ್ತು ಪತ್ರಿಕೆ ವಿರುದ್ಧ ಮುಖ್ಯ ಮಂತ್ರಿಗಳಿಗೆ ,ಪತ್ರಿಕಾ ಸಂಪಾದಕರಿಗೆ ಮತ್ತು ಪ್ರೆಸ್ ಕೌನ್ಸಿಲ್ ಗೆ ದೂರು ನೀಡಲು ನಿರ್ಧರಿಸಿದೆ. ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟಕ್ಕೂ ಸಂಘಟನೆ ಸಿದ್ಧವಾಗಿದ್ದು, ಜನರು ಸಾಮರಸ್ಯವನ್ನು ಕದಡದೆ, ಕೋಮುವಾದಿಗಳ ಕುಪ್ರಯತನವನ್ನು ವಿಫಲಗೊಳಿಸಬೇಕೆಂದು ಕನ್ನಡಿಗರಲ್ಲಿ ಮುಸ್ಲಿಂ ಜಮಾಅತ್ ಮನವಿ ಮಾಡಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!