janadhvani

Kannada Online News Paper

ಕೊರೊನಾ ಲಾಕ್‌ಡೌನ್; ತುರ್ತು ರಕ್ತದ ಆವಶ್ಯಕತೆ ಪೂರೈಸಲು ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ತಂಡ ರೆಡಿ!

ಬೆಳ್ತಂಗಡಿ: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ನಿರ್ದೇಶಿಸಿದಂತೆ ಬ್ಲಡ್ ಸೈಬೋ ತುರ್ತು ಸೇವೆ ಘಟಕದಿಂದ, ಕೊರೊನಾ ವೈರಸ್ ವ್ಯಾಪಕತೆಯ ಸಂದರ್ಭದಲ್ಲಿ ಅಪಘಾತ, ಹೆರಿಗೆ, ತೀವ್ರ ಅನಾರೋಗ್ಯ ಮೊದಲಾದ ತುರ್ತು ಸಂದರ್ಭದಲ್ಲಿ ರಕ್ತದ ಆವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಬೆಳ್ತಂಗಡಿ ಎಸ್ಸೆಸ್ಸೆಫ್ ಡಿವಿಷನ್ ವ್ಯಾಪ್ತಿಯ ರಕ್ತದಾನಿಗಳ ಗುಂಪು ಕಾರ್ಯಪ್ರವೃತವಾಗಿದೆ. ಯಾರಿಗಾದರೂ ತುರ್ತು ರಕ್ತದ ಅಗತ್ಯತೆ ಕಂಡು ಬಂದರೆ ಅಂತವರಿಗೆ ಸಹಾಯವಾಗಲು ಸಿದ್ಧವೆಂದು ಸಂಘಟನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುರ್ತು ಆವಶ್ಯಕತೆ ಇರುವವರು ಈ ಕಳಗಿನ ನಂಬರಿಗೆ ಸಂಪರ್ಕಿಸುವಂತೆ ಕೋರಿದೆ.

ತೌಫೀಖ್ ವೇಣೂರು-7259730616,
ಎಂ.ಶರೀಫ್ ಬೆರ್ಕಳ-9535222861,
ಶರೀಫ್ ನಾವೂರು-9844085335,
ಝುಬೈರ್ ಶಾಂತಿನಗರ-9972515561.

error: Content is protected !! Not allowed copy content from janadhvani.com