ಉಡುಪಿ: ಕೊರೋನಾ ವೈರಸ್ ಭೀತಿಯಿಂದ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆಯು 2020 ಮಾರ್ಚ್ 23 ರಿಂದ 31ರ ವರೆಗೆ ಹೊರಡಿಸಿದ ‘ಲಾಕ್ ಡೌನ್’ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಉಡುಪಿ, ಚಿಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ.
ಆರೋಗ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಆದ್ದರಿಂದ ಮನೆಯಿಂದ ಹೊರಬಾರದೆ, ಮನೆಯಲ್ಲೇ ನಮಾಜನ್ನು ನಿರ್ವಹಿಸಿ, ಆರಾಧನಾ ಕರ್ಮಗಳನ್ನು ಹೆಚ್ಚಿಸಿ, ಈ ಮಹಾಮಾರಿಯಿಂದ ಮುಕ್ತಿ ಲಭಿಸಲು ಅಲ್ಲಾಹನಲ್ಲಿ ಪ್ರಾರ್ಥಿಸ ಬೇಕಾಗಿದೆ.
ಜುಮುಅ ಸಹಿತ ಐದು ಹೊತ್ತಿನ ನಮಾಝ್ ಗಳನ್ನು ತಾತ್ಕಾಲಿಕ ಮಸೀದಿಯಲ್ಲಿ ನಿಲ್ಲಿಸಿ ಎಂಬ ಸರಕಾರದ ಆದೇಶವನ್ನು ಪಾಲಿಸಿ,ಮನೆಯಲ್ಲೇ ನಮಾಝ್ ನಿರ್ವಹಿಸ ಬೇಕಾಗಿದೆ. ಕೊರೋನಾ ಒಂದು ಸಾಂಕ್ರಾಮಿಕ ರೋಗವಾಗಿದ್ದು,ಅದನ್ನು ತಡೆಗಟ್ಟಲು ಸರಕಾರ ಮತ್ತು ಆರೋಗ್ಯ ಇಲಾಖೆ ಯಾವುದೇ ಆದೇಶಗಳನ್ನು ಹೊರಡಿಸಿದರೂ ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಜುಮುಅ ದಿನ ಮನೆಯಲ್ಲಿ 4 ರಕಅತ್ ಳುಹರ್ ನಮಾಝ್ ನಿರ್ವಹಿಸಿ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಮ್.ಇಬ್ರಾಹಿಂ ಮುಸ್ಲಿಯಾರ್ ಬೇಕಲ ತಿಳಿಸಿರುವುದಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.