janadhvani

Kannada Online News Paper

ಮಸೀದಿಗಳಲ್ಲಿ ಜುಮುಆ ಜಮಾಅತ್‌ಗೆ ನಿಯಂತ್ರಣ :ಕುವೈತ್ ಇತಿಹಾಸದಲ್ಲೇ ಪ್ರಥಮ

ಕುವೈತ್ ಸಿಟಿ: ಕೋವಿಡ್ 19 ಅನ್ನು ನಿಯಂತ್ರಿಸುವ ಭಾಗವಾಗಿ ಮಸೀದಿಗಳಲ್ಲಿ ಜುಮುಆ ಜಮಾಅತ್‌ಗೆ ನಿಯಂತ್ರಣ ಏರ್ಪಡಿಸಲಾಗಿದ್ದು, ಕುವೈತ್ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದೆ. ಔಕಾಫ್ ಸಚಿವಾಲಯವು ದೇಶದ ಮುಅಧಿನ್‌ಗಳಿಗೆ ಆಝಾನ್‌ನ ಜೊತೆಗೆ ಮನೆಯಲ್ಲಿ ನಮಾಝ್ ನಿರ್ವಹಿಸಲು ಪ್ರೇರೇಪಿಸುವಂತೆ ನಿರ್ದೇಶನ ನೀಡಿದೆ.

ವಿವಿಧ ದೇಶಗಳ ಜನರು ಮಸೀದಿಗಳಲ್ಲಿ ಜಮಾತ್‌ನಲ್ಲಿ ಸೇರುವ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ಆ ಮೂಲಕ ಕೋವಿಡ್ 19 ರ ಹರಡುವಿಕೆಯನ್ನು ಕಡಿಮೆ ಮಾಡಲು ಆರೋಗ್ಯ ಸಚಿವಾಲಯವು ಶುಕ್ರವಾರದಿಂದ ಈ ನಿರ್ಧಾರವನ್ನು ಪ್ರಕಟಿಸಿದೆ. ಕಳೆದ ಶುಕ್ರವಾರ ಅಧಿಕೃತ ಪ್ರಕಟಣೆಯ ವಿಳಂಬದಿಂದಾಗಿ ಹಲವು ಕಡೆ ಜುಮುಆ ನಮಾಝ್ ನಡೆಯಿತು. ಅಸರ್ ನಮಾಝ್‌ನ ಬಳಿಕ ಆಝಾನ್ ಕರೆಯಲ್ಲಿ ಬದಲಾವಣೆ ಮಾಡಲಾಗಿದೆ.

ಕುವೈತ್ ಇತಿಹಾಸದಲ್ಲಿ ಪ್ರಥಮ ಬಾರಿಗೆ, ಮಸೀದಿಗಳಲ್ಲಿ ಜಮುಆ ನಮಾಝ್‌ಗೆ ನಿಯಂತ್ರಣ ಏರ್ಪಡಿಸಲಾಗಿದ್ದು, ಹಳೆಯ ಕಾಲದ ವಲಸಿಗರಿಗೂ ಇದು ಮೊದಲ ಅನುಭವವಾಗಿದೆ. ಜೊತೆಗೆ ಈ ವರೆಗೆ ಕೇಳಿಸುತ್ತಿದ್ದ ಆಝಾನ್‌ನ ಪದಗಳಿಗೂ ಹೊಸ ರೂಪವನ್ನು ನೀಡಲಾಗಿದೆ.

error: Content is protected !! Not allowed copy content from janadhvani.com