janadhvani

Kannada Online News Paper

ಕೋವಿಡ್’19: ದೋಹಾದಿಂದ ಭಾರತಕ್ಕೆ ವಿಮಾನ ಸೇವೆ ಕಡಿತ

ದೋಹಾ: ಕೋವಿಡ್ -19 ಹಿನ್ನೆಲೆಯಲ್ಲಿ ದೋಹಾದಿಂದ ಭಾರತಕ್ಕೆ ಹಾರಾಡುವ ವಿವಿಧ ವಿಮಾನಗಳ ಸೇವೆಗಳನ್ನು ಕಡಿತಗೊಳಿಸಲಾಗಿದೆ. ಖತರ್ ಏರ್ವೇಸ್, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೊ ಮತ್ತು ಶ್ರೀಲಂಕನ್ ಏರ್ಲೈನ್ಸ್ ತಮ್ಮ ಸೇವೆಗಳನ್ನು ಕಡಿತಗೊಳಿಸಿವೆ.

ಭಾರತದಿಂದ ಖತರ್‌ಗೆ ಎಲ್ಲಾ ಪ್ರಯಾಣವನ್ನು ನಿಷೇಧಿಸಲಾಗಿದ್ದರೂ, ಪ್ರಸಕ್ತ ಖತರ್‌‌ನಿಂದ ಭಾರತಕ್ಕೆ ಹಾರಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಹೊಸ ಪರಿಸ್ಥಿತಿಯಲ್ಲಿ, ಎಲ್ಲಾ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಕಡಿತಗೊಳಿಸಿವೆ. ಖತರ್ ಏರ್‌ವೇಸ್‌ನ ದೋಹಾ ಟು ಕ್ಯಾಲಿಕಟ್ ದೈನಂದಿನ ಸೇವೆಯನ್ನು ವಾರದಲ್ಲಿ ಮೂರಕ್ಕೆ ಇಳಿಸಿದೆ.

ಮಂಗಳವಾರ, ಗುರುವಾರ ಮತ್ತು ರವಿವಾರದಂದು ಮಾತ್ರ ಈ ಸೇವೆ ಲಭ್ಯವಿದೆ. ಈ ತಿಂಗಳ 31 ರವರೆಗೆ ನಿರ್ಬಂಧಗಳು ಜಾರಿಯಲ್ಲಿವೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ಸಹ ಭಾರತಕ್ಕೆ ಮತ್ತು ಭಾರತದಿಂದ ಹೊರಗಿನ ಎಲ್ಲಾ ಸೇವೆಗಳನ್ನು ಮುಂದಿನ 18ರ ವರೆಗೆ ನಿಲ್ಲಿಸಿದೆ. ಒಮಾನ್ ಏರ್ ಮತ್ತು ಶ್ರೀಲಂಕನ್ ಏರ್ ಲೈನ್ಸ್ ‌ನ ಸೇವೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

error: Content is protected !! Not allowed copy content from janadhvani.com