ಜಿದ್ದಾ: ಎಕ್ಸಿಟ್ ವೀಸಾದಲ್ಲಿ ಸೌದಿಯಿಂದ ನಿರ್ಗಮಿಸಿದವರು ಮರು ಪ್ರವೇಶಕ್ಕೆ ಆರೋಗ್ಯ ಪ್ರಮಾಣಪತ್ರ ಅಗತ್ಯವಿರುವ ಸುತ್ತೋಲೆಯು ಪ್ರಸ್ತುತ ಭಾರತೀಯರಿಗೆ ಅನ್ವಯಿಸುವುದಿಲ್ಲ. ಭಾರತೀಯರಿಗೆ ಇನ್ನೂ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ಸೌದಿ ವಿಮಾನಯಾನ ಪ್ರಾಧಿಕಾರ ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ ಪ್ರಮಾಣಪತ್ರವು ಈಜಿಪ್ಟ್‌ನಿಂದ ಹಿಂದಿರುಗಿದವರಿಗೆ ಮಾತ್ರ ಅನ್ವಯಿಸುತ್ತದೆ. ಈ ಹಿಂದೆ, ಎಲ್ಲಾ ಕೊರೋನಾ ಬಾಧಿತ ದೇಶಗಳ ಜನರಿಗೆ ಇದು ಅನ್ವಯಿಸುತ್ತದೆ ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಕೊರೋನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇತ್ತು. ಪ್ರವಾಸದ 24 ಗಂಟೆಗಳ ಒಳಗೆ ತೆಗೆದುಕೊಂಡ ಪ್ರಮಾಣಪತ್ರದ ಅಗತ್ಯವಿದೆ ಎಂದು ಅವರಿಗೆ ತಿಳಿಸಲಾಗಿತ್ತು. ಆದರೆ ಇದು ಇನ್ನೂ ಜಾರಿಗೆ ಬಂದಿಲ್ಲ ಎಂದು ವಿಮಾನಯಾನ ಮೂಲಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ತಿಳಿದುಬಂದಿದೆ.
ಎಲ್ಲಾ ರಾಷ್ಟ್ರೀಯತೆಗಳಿಗೆ ಯಾವಾಗಿನಿಂದ ಆರೋಗ್ಯ ಪ್ರಮಾಣಪತ್ರಗಳು ಕಡ್ಡಾಯವಾಗಲಿದೆ ಎಂಬ ಬಗ್ಗೆಯೂ ಸ್ಪಷ್ಟವಾಗಿಲ್ಲ. ಪ್ರಸ್ತುತ, ಭಾರತೀಯರು ಸೌದಿಗೆ ಹಿಂತಿರುಗಲು ಅಥವಾ ಹೊಸ ವೀಸಾ ಪಡೆಯಲು ಕೊರೋನಾ ಮುಕ್ತ ಪ್ರಮಾಣಪತ್ರ ಅಗತ್ಯವಿಲ್ಲ.
ಹೆಚ್ಚಿನ ಮಾಹಿತಿಗಳಿಗಾಗಿ ಭಾರತದ ಪ್ರಮುಖ ಏಜೆಂಟ್ ಅಥವಾ ಸೌದಿಯಾ ಪೊರ್ಟಲ್ ನ್ನು ಸಂಪರ್ಕಿಸಿ.