janadhvani

Kannada Online News Paper

ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವಾರ್ಷಿಕ ಮಹಾ ಸಭೆಯು (24-02-2020) ಆದಿತ್ಯವಾರ ಮಂಚಿ ಕಯ್ಯೂರ್ ಸುನ್ನೀ ಮಹಲ್‌ನಲ್ಲಿ ಸೆಕ್ಟರ್ ಅಧ್ಯಕ್ಷರಾದ ಅಸ್ಲಂ ಸಂಪಿಲ’ರವರ ನೇತೃತ್ವದಲ್ಲಿ ನಡೆಯಿತು.

ಸುನ್ನೀ ಮಹಲ್ ಸಾರಥಿಯೂ,‌ ಪ್ರಮುಖ ಸುನ್ನೀ ನಾಯಕರಾದ ಎಣ್ಮೂರ್ ಉಸ್ತಾದ್ ದುಆಶೀರ್ವಚನಗೈದರು, ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ವಾರ್ಷಿಕ ವರದಿ ವಾಚಿಸಿದರು, ಜಾಬಿರ್ ಪಡ್ಪು ಲೆಕ್ಕಪತ್ರ ಮಂಡಿಸಿದರು.

ಡಿವಿಷನ್ ವೀಕ್ಷಕರಾಗಿ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲೀ ಮದನಿ ಆಲಂಪಾಡಿ,‌ ಈಸ್ಟ್ ಝೋನ್ ಕೋಶಾಧಿಕಾರಿ ಆಬಿದ್ ನ‌ಈಮಿ ಕಟ್ಟತ್ತಿಲ,‌ ಡಿವಿಷನ್ ಕೋಶಾಧಿಕಾರಿ ಅಲೀ ಮದನಿ ಸೆರ್ಕಳ, ರಫೀಕ್ ಝುಹ್ರಿ ಮಂಚಿ, ಜಿಲ್ಲಾ ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್, ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಉಸ್ತುವಾರಿ ಅನ್ಸಾರ್ ಕಾರಾಜೆ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ;
ಅಧ್ಯಕ್ಷರಾಗಿ ಝುಬೈರ್ ಮೋಂತಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನೌಫಳ್ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಜಾಬಿರ್ ಪಡ್ಪು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅರ್ಫಾಝ್ ಕಯ್ಯೂರ್, ಉಪಾಧ್ಯಕ್ಷರುಗಳಾಗಿ ಹಂಝ ಮಂಚಿ, ಸಿದ್ದೀಕ್ ನೂಜಿ, ಕಾರ್ಯದರ್ಶಿಗಳಾಗಿ ಲುಕ್ಮಾನ್ ಕುಕ್ಕಾಜೆ, ಫರ್ವಾಝ್ ಮಂಚಿ ಹಾಗೂ 17 ಸದಸ್ಯರುಗಳನ್ನೋಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ದನ್ಯವಾದಗೈದರು