janadhvani

Kannada Online News Paper

ಟ್ರಂಪ್ ಗೆ ಅಪ್ಪುಗೆಯ ಸ್ವಾಗತ ನೀಡಿದ ಮೋದಿ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ ತಲುಪಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ರಂಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅಪ್ಪುಗೆಯ ಸ್ವಾಗತ ನೀಡಿದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಗಾರ್ಡ್ ಆಫ್ ಆನರ್ ನೀಡಲಾಯಿತು. ಮೇಜರ್ ಸುಭಾಷ್ ನೇತೃತ್ವದ ಸೈನಿಕರು ಟ್ರಂಪ್ ಅವರನ್ನು ಗೌರವಿಸಿದರು.

ಅಮೆರಿಕದ ಏರ್ ಫೋರ್ಸ್ ಒನ್ ವಿಮಾನ ಭಾನುವಾರ ಹಿಂದೂಸ್ತಾನ್‌ಗೆ(ಭಾರತಕ್ಕೆ) ಹೊರಟಿತು. ಈ ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬ ಉಪಸ್ಥಿತರಿದ್ದರು. ಸೋಮವಾರ ಬೆಳಿಗ್ಗೆ 11.35 ರ ಸುಮಾರಿಗೆ ಟ್ರಂಪ್ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿತು.