janadhvani

Kannada Online News Paper

ಜಾಮಿಯಾ ಗುಂಡಿನ ದಾಳಿ: ಪಿಸ್ತೂಲ್ ನೀಡಿದ ಅಜಿತ್ ಬಂಧನ

ನವದೆಹಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿಗೆ ಬಳಸಲಾದ ಪಿಸ್ತೂಲ್ ಮಾರಾಟ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಅಜಿತ್(25)ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಜೇವರ್ ಸಮೀಪದ ಶಾಜಪುರ ಎಂಬ ಗ್ರಾಮದಲ್ಲಿ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಅಜೀತ್, ಉತ್ತರಪ್ರದೇಶ ವಿವಿಯಲ್ಲಿ ಬಿ.ಇಡಿ ಅಭ್ಯಾಸ ಮಾಡುತ್ತಿದ್ದ.

32 ಕೆ.ಜಿ. ವಿಭಾಗದ ಜೂನಿಯರ್ ರೆಸ್ಟಲಿಂಗ್ನಲ್ಲಿ ಚಾಂಪಿಯನ್ ಆಗಿದ್ದ. ಈತನ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆತನ ಬಂಧನದ ಬಗ್ಗೆ ಕಾನೂನಿನ ರಿತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಶೂಟೌಟ್ ಪ್ರಕರಣದ ತನಿಖಾ ತಂಡದ ಮುಖ್ಯಸ್ಥ ರಾಜೇಶ್ ದೇವ್ ತಿಳಿಸಿದ್ದಾರೆ.