ದಮ್ಮಾಮ್(ಜನಧ್ವನಿ) : ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ದುಡಿಯುತ್ತಿದ್ದ ವೀರಪ್ಪಗೌಡ ಎಂಬವರು ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು.
ದಿನವೂ ಮನೆಯವರಿಗೆ ಕರೆಮಾಡಿ ಮಾತನಾಡುತಿದ್ದ ವೀರಪ್ಪಗೌಡರು ಕಳೆದ ದಿನಗಳಿಂದ ಯಾವುದೇ ಸಂಪರ್ಕಕ್ಕೂ ಸಿಗದೆ ಮನೆಯವರು ತಮ್ಮ ಅಸಾಯಕತೆಯನ್ನು ಯಾರಲ್ಲಿ ಹೇಳಬೇಕೆಂದು ತೋಚದೆ ಇರುವ ಸಂಧರ್ಭದಲ್ಲಿ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಾಡುತ್ತಿರುವ ಸಾಂತ್ವನ ಕಾರ್ಯಕ್ರಮಗಳ ವಿಷಯ ತಿಳಿದ ಕುಟುಂಬವು ಹೇಗೋ ಅಲ್ ಜುಬೈಲ್ KCF ಕಾರ್ಯಕರ್ತರಾದ ಸುಲೈಮಾನ್ ಮಾಚಾರ್ ರವರಿಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿತ್ತಾರೆ.
ಕೂಡಲೇ ಕಾರ್ಯ ಸನ್ನದ್ಧರಾದ ಕೆಸಿಎಫ್ ಜುಬೈಲ್ ಸೆಕ್ಟರ್ ಝೋನ್ ಸಾಂತ್ವನ ವಿಭಾಗಕ್ಕೆ ವಿಷಯವನ್ನು ತಿಳಿಸಿರುತ್ತಾರೆ.
ವಿಷಯ ತಿಳಿದ ಕೆಸಿಎಫ್ ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ನಾಯಕರಾದ ಭಾಷಾ ಗಂಗಾವಳಿ ಮತ್ತು ತಂಡ, ವೀರಪ್ಪಗೌಡ ರವರು ಎಲ್ಲಿ ಇದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಎಲ್ಲಾ ಆಸ್ಪತ್ರೆಗಳಲ್ಲಿ ವಿಚಾರಿಸಿ ಕೊನೆಗೆ ದಮ್ಮಾಮಿನ ಸೆಂಟ್ರಲ್ ಅಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೀರಪ್ಪಗೌಡ ರವರನ್ನು ಗುರುತಿಸಿ ಕೊಳ್ಳುತ್ತಾರೆ.
ನಂತರ ಇವರ ಹೆಚ್ಚಿನ ಚಿಕಿತ್ಸೆ ಮತ್ತು ಕಡತಪತ್ರ ಸಂಭಂದಿಸಿದ ವಿಷಯಗಳಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ನಾಯಕರಾದ ಮುಹಮ್ಮದ್ ಮಲೆಬೆಟ್ಟುರವರು ಬಾಷಾ ಗಂಗಾವಳಿ ಜೊತೆ ಸೇರಿ ಇಂಡಿಯನ್ ಎಂಬಸಿ ಮತ್ತು ಸೌದಿ ಅರೇಬಿಯಾ ಆರೋಗ್ಯ ಇಲಾಖೆಯಿಂದ ಬೇಕಾದ ಎಲ್ಲಾ ಕಡತಪತ್ರಗಳನ್ನು ಸಂಗ್ರಹಿಸಿ ಅವರಿಗೆ ಊರಿಗೆ ಹೋಗುವ ಟಿಕೆಟ್ ನೀಡಿ ಕಳುಹಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಇಂಡಿಯನ್ ಎಂಬಸಿಯ ಸಹಾಯ ಶ್ಲಾಘನೀಯ.
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವರನ್ನು ಇಶಾರ ಪತ್ರಿಕೆಯ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ರಜೆಯ ನಿಮಿತ್ತ ಊರಿಗೆ ತರಳಿದ ಕೆಸಿಎಫ್ ನಾಯಕರಾದ ಶಫೀಖ್ ಕಾಟಿಪಳ್ಳ ಮತ್ತು ಅಶ್ರಫ್ ನಾವುಂದ ಮತ್ತು ವೀರಪ್ಪ ಗೌಡರವರ ಕುಟುಂಬಸ್ಥರು ಬಹಳ ಸಂತೋಷದಿಂದ ಸ್ವೀಕರಿಸಿದರು.
ಅವರ ಕುಟುಂಬದವರ ಸಂತಸಕ್ಕೆ ಪಾರವೇ ಇರದೆ ಅವರ ಕಣ್ಣಿನಿಂದ ಬಂದ ಆನಂದ ಭಾಶ್ಪವು ಕೃತಜ್ಞತೆಯ ಉತ್ತರವಾಯಿತು. ಅಸ್ಪತ್ರೆಯಲ್ಲಿ ನನಗೆ ಎದ್ದು ನಡೆಯಲಾಗದ ಪರಿಸ್ಥಿತಿಯಲ್ಲಿ ನಮಗೆ ಪರಿಚಯವೇ ಇಲ್ಲದ ಕೆಸಿಎಫ್ನ ನಾಯಕ ಮೊಹಮ್ಮದ್ ಮಳೆಬೆಟ್ಟು ರವರು ಬಂದು ನನ್ನ ದಿಚರಿಯ ಎಲ್ಲಾ ವಿಷಯಗಳಲ್ಲಿ ನನ್ನ ಹೆಗಲು ಹಿಡಿದುಕೊಂಡು ನನ್ನ ಸೇವೆ ಮತ್ತು ಪ್ರತಿಯೊಂದು ವಿಷಯದಲ್ಲೂ, ನನ್ನ ಸೇವೆ ಮಾಡಿರುವ ಕೆಸಿಎಫ್ ಸಂಘಟನೆಗೆ ನಾನು ಯಾವ ರೀತಿ ಕೃತಜ್ಞತೆ ಸಲ್ಲಿಸಲಿ ಎಂದು ಮನದಂತರಾಳದಿಂದ ಮಾತಿನ ಮೂಲಕ ಸ್ಮರಿಸಿದರು.