janadhvani

Kannada Online News Paper

ಪೋಲೀಸ್ ದೌರ್ಜನ್ಯ ಹಾಗೂ NRC, CAB ವಿರುದ್ಧ ಅಯ್ಯಂಗೇರಿಯಲ್ಲಿ ಭಿತ್ತಿಪತ್ರ ಪ್ರದರ್ಶನ

ಮಡಿಕೇರಿ (ಡಿ 27): ಮಡಿಕೇರಿ ತಾಲೂಕು ಅಯ್ಯಂಗೆರಿಯಲ್ಲಿ ಗ್ರಾಮಸ್ಥರು ಆಯೋಜಿಸಿದ ಮಂಗಳೂರು ಪೋಲೀಸ್ ದೌರ್ಜನ್ಯದ ವಿರುದ್ಧ ಭಿತ್ತಿಪತ್ರ ಪ್ರದರ್ಶನ & ನ್ಯಾಯಕ್ಕಾಗಿ ಹೋರಾಟದ ಧ್ವನಿಯು ಅಯ್ಯಂಗೆರಿ ಜುಮಾ ಮಸೀದಿ ಅಂಗಣದಲ್ಲಿ ಜುಮಾ ನಮಾಝಿನ ಬಳಿಕ ನಡೆಯಿತು. ಸಭೆಯಲ್ಲಿ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.

NRC ಮತ್ತು CAB ಮೂಲಕ ದೇಶದಲ್ಲಿ ನಡೆಯಲಿರುವ ಭವಿಷ್ಯತ್ತಿನ ಬಗ್ಗೆ ವಿವರಿಸಿ, ಅದರ ವಿರುದ್ಧ ಘೋಷಣೆ ಮೊಳಗಿಸಲಾಯಿತು. ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಹ ಮಾಧ್ಯಮಗಳು ‌ಹಾಗೂ ಮಂಗಳೂರಿನಲ್ಲಿ ಎರಡು ಅಮಾಯಕರ ಹತ್ಯೆಗೆ ಕಾರಣರಾದ ಪೋಲೀಸರ ವಿರುದ್ಧ ಭಿತ್ತಿಪತ್ರ’ಗಳನ್ನು ಪ್ರದರ್ಶಿಸಿ ಹೋರಾಟದ ಧ್ವನಿಯನ್ನು ನಿರಂತರವಾಗಿಸುವ ಎಚ್ಚರಿಕೆಯ ಸಂದೇಶದೊಂದಿಗೆ ವಿಶೇಷ ರೀತಿಯಲ್ಲಿ ಪ್ರತಿಭಟಿಸಲಾಯಿತು.