janadhvani

Kannada Online News Paper

ಸೌದಿಯಿಂದ ಕೇರಳಕ್ಕೆ ‘ಗೋ ಏರ್’ ನಿಂದ ಹೆಚ್ಚಿನ ಸೇವೆಗಳು ಆರಂಭ

ರಿಯಾದ್: ಗೋ ಏರ್ ವಿಮಾನ ಕಂಪೆನಿಯು ಸೌದಿಯಿಂದ ಕೇರಳಕ್ಕೆ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ಯೋಜನೆ. ದಮ್ಮಾಮ್ ಜೊತೆಗೆ ರಿಯಾದ್ ಮತ್ತು ಜಿದ್ದಾದಿಂದ ಕಣ್ಣೂರಿಗೆ ವಿಮಾನವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗೋ ಏರ್ ಸೌದಿ ಅರೇಬಿಯಾದ ಪ್ರಮುಖ ಉದ್ಯಮ ಗ್ರೂಪ್ ಅಲ್ ಮಜ್ದೂಯಿನ ಸಹಭಾಗಿತ್ವದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲಿದೆ.

ಗೋ ಏರ್ ದಮಾಂನಿಂದ ಕಣ್ಣೂರಿಗೆ ಮೊದಲ ವಿಮಾನಯಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಗೋ ಏರ್ ಇಂಟರ್ ನ್ಯಾಷನಲ್ ಆಪರೇಶನ್ಸ್ ಉಪಾಧ್ಯಕ್ಷ ಅರ್ಜುನ್ ದಾಸ್ ಗುಪ್ತಾ ಮಾತನಾಡಿ, ದಮ್ಮಾಮ್ ಸಹಿತ, ಸೌದಿ ಅರೇಬಿಯಾದ ಇತರ ವಿಮಾನ ನಿಲ್ದಾಣಗಳಿಂದ ಮತ್ತು ಕೇರಳದ ಇತರ ವಿಮಾನ ನಿಲ್ದಾಣಗಳಿಗೂ ಸಹ ಸೇವೆಯನ್ನು ಪ್ರಾರಂಭಿಸಲಿವೆ ಎಂದು ಹೇಳಿದರು.

ಸಾಮಾನ್ಯ ವಲಸಿಗರಿಗೆ ಆರಾಮದಾಯಕ ಸವಾರಿ ಒದಗಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಮಜ್ದೂಯಿ ಗ್ರೂಪ್‌ನ ಉಪಾಧ್ಯಕ್ಷ ಯೂಸುಫ್ ಅಲ್-ಮಜ್ದೂಯಿ ಹೇಳಿದರು. ಕಾರ್ಯಕ್ರಮದಲ್ಲಿ ಉಭಯ ಕಂಪನಿಗಳ ನಡುವಿನ ಒಪ್ಪಂದ ಮತ್ತು ಪರಸ್ಪರ ಕರಾರು ಪತ್ರಗಳ ಹಸ್ತಾಂತರ ನಡೆಯಿತು. ಟಿಕೆಟ್ ಬುಕಿಂಗ್ ಈಗ ಅರ್ಜಾ ಟ್ರಾವೆಲ್ಸ್ ಎಂಬ ಗುಂಪಿನ ಮೂಲಕ ಲಭ್ಯವಿದೆ. ಗೋ ಏರ್‌ ಪಿಆರ್ ವಿಭಾಗದ ಉಪಾಧ್ಯಕ್ಷ ಭಗುಲ್ ಗಾಲಾ ಮತ್ತು ಜನರಲ್ ಮ್ಯಾನೇಜರ್ ಜಲೀಲ್ ಖಾಲಿದ್ ಉಪಸ್ಥಿತರಿದ್ದರು.