ಕೋಝಿಕೋಡ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಮಹಿಳೆಯರು ಮತ್ತು ಮಕ್ಕಳನ್ನು ಬೀದಿಗೆ ಕರೆದೊಯ್ಯುವ ಅಗತ್ಯವಿಲ್ಲ ಎಂದು ಸಮಸ್ಥ ಇ.ಕೆ. ವಿಭಾಗದ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದ್ದಾರೆ. ಪ್ರತಿಭಟನೆ ಮಿತಿಮೀರದಿರಲಿ ಎಂದು ಅವರು ಆಗ್ರಹಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಪಕ್ಷ, ಧರ್ಮ ಬೇಧವಿಲ್ಲದೆ ತೊಡಗಿಸಿ ಕೊಂಡಿದ್ದಾರೆ. ಈ ಮಧ್ಯೆ, ಭಾವನೆಯ ಲಾಭವನ್ನು ಪಡೆದುಕೊಳ್ಳುವ ಕೆಲವು ಉಗ್ರಗಾಮಿ ಗುಂಪುಗಳ ಒಳಸಂಚುಗಳಿಗೆ ಕಾರ್ಯಕರ್ತರು ವಂಚಿತರಾಗಬಾರದು. ಕಾನೂನು ವಿರುದ್ಧವಾದ ಪ್ರತಿಭಟನೆ ಮೂಲಕ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಿಫ್ರಿ ತಂಙಳ್ ಹೇಳಿದರು.
ಒಂದು ವಿಭಾಗವನ್ನು ಕಡೆಗಣಿಸಿ ರೂಪಿಸಲಾದ ಪೌರತ್ವ ಕಾನೂನಿನ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕ ಭಾವನೆಯನ್ನು ಮನಗಂಡು ಕೇಂದ್ರ ಸರ್ಕಾರವು ಕಾನೂನನ್ನು ಪರಿಷ್ಕರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.






