ಮಕ್ಕತುಲ್ ಮುಕರ್ರಮಃ: ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಯ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿ ಧಾರ್ಮಿಕ ವಿಭಜನೆಗೆ ಕೇಂದ್ರ ಸರಕಾರ ಮುಂದಾಗಿದೆ.
ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಜನಾಕ್ರೋಶ ದೈನಂದಿನ ತಾರಕಕ್ಕೇರುತ್ತಿದ್ದು, ಕೇಂದ್ರ ಸರ್ಕಾರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗೆ ಮುಂದಾಗಿಲ್ಲ.ಕೇಂದ್ರ ಸರಕಾರವು ಶೀಘ್ರದಲ್ಲೇ CAA ಯನ್ನು ಹಿಂಪಡೆದು ದೇಶದಲ್ಲಿ ಶಾಂತಿ ನೆಲೆಸುವಲ್ಲಿ ಗಮನ ಹರಿಸಬೇಕಾಗಿದೆ.
ರಾಜ್ಯದ ಪ್ರಜಾಪ್ರಭುತ್ವ ಸಂರಕ್ಷಣೆಗಾಗಿ ಹೋರಾಡುವ ವೇಳೆ ಪೋಲೀಸರ ದೌರ್ಜನ್ಯದಿಂದ ಹಲವಾರು ಮಂದಿ ಅಸುನೀಗಿದ್ದು, ನೂರಾರು ಮಂದಿ ತೀವ್ರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೂ ಅಲ್ಲದೇ ಹಲವಾರು ಮಂದಿಯನ್ನು ಬಂಧಿಸಲಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಭವ್ಯ ಭಾರತದ ಪ್ರಜಾಪ್ರಭುತ್ವ ಪರಂಪರೆಯೊಂದಿಗೆ, ಸಹಬಾಳ್ವೆಯಿಂದ ಸರ್ವ ಧರ್ಮೀಯರೊಂದಿಗೆ ಬದುಕುವ ಶಾಂತಿ ಮರುಕಳಿಸಲಿ ಎಂದು ಹಾರೈಸಿ KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಸಾಮೂಹಿಕ ಉಮ್ರಾ ಹಾಗೂ ವಿಶೇಷ ಪ್ರಾರ್ಥನೆ ಕಾರ್ಯಕ್ರಮ ನಡೆಸಲಾಯಿತು.