ಮಂಗಳೂರು, ಡಿಸೆಂಬರ್ 19 : ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ
ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರುವ ಬದಲಾಗಿ ಪ್ರತಿಭಟನಾ ನಿರತರ ಮೇಲೆ ಮತ್ತು ಪತ್ರಕರ್ತರ ಮೇಲೆ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ನಡೆಸಿರುವುದು ಅದೂ ಕೂಡ ಮುಖ್ಯಮಂತ್ರಿಯವರ ಆದೇಶದ ಹೊರತಾಗಿಯೂ ಇದು ಕಾನೂನಿಗೂ ವಿರುದ್ಧ.. ಈ ಕ್ರತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ.
ಈ ಒಂದು ಸಣ್ಣ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲು ಅಸಾಧ್ಯವಾದ ಪೊಲೀಸ್ ಕಮಿಷನರ್ ನಿಂದ ಇಂದು ಮಂಗಳೂರು ಅಕ್ಷರಶಃ ರಣರಂಗವಾಗಿ ಮಾರ್ಪಾಡಾಗಿದೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಅಮಾಯಕ ಯುವಕರ ಬಲಿಗೆ ಪೋಲೀಸ್ ಆಯುಕ್ತರೇ ನೇರ ಕಾರಣ
ರಾಜ್ಯ ಸರ್ಕಾರ ಕೂಡಲೇ ಮಂಗಳೂರು ಪೋಲೀಸ್ ಆಯುಕ್ತರನ್ನು ವಜಾ ಗೊಳಿಸಬೇಕು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಉತ್ತಮ ಪರಿಹಾರ ನೀಡಬೇಕು, ಗಾಯಾಳುಗಳಿಗೆ ಬೇಕಾದ ಚಿಕಿತ್ಸೆಯನ್ನು ಸರ್ಕಾರವೇ ನೀಡಬೇಕು.
ನಮ್ಮ ಸಮುದಾಯದವರು ಶಾಂತಿಯುತವಾದ , ಕಾನೂನು ಬದ್ಧವಾದ ಹೋರಾಟ ನಡೆಸಬೇಕು
ಕಾನೂನು ಬದ್ಧವಾದ ಹಾಗೂ ಅಶಾಂತಿಯನ್ನು ಯಾವುದೇ ಕಾರ್ಯ ನಮ್ಮಿಂದ ಉಂಟಾಗದಿರಲಿ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಹಾಗೂ ಜಿಲ್ಲಾ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟಪ್ರಕಟಣೆಯಲ್ಲಿ ತಿಳಿಸಿದ್ದಾರೆ.