janadhvani

Kannada Online News Paper

ಮಂಗಳೂರಿನಲ್ಲಿ ಪೋಲೀಸರ ಹಿಂಸಾಚಾರ: ಕೆಸಿಎಫ್ ಸೌದಿ ಅರೇಬಿಯಾ ಖಂಡನೆ

ಕೇಂದ್ರ ಸರಕಾರ ಜಾರಿಗೊಳಿಸಿದ NRC & CAA ವಿರುದ್ದ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರಂತೆ ಗುರುವಾರ ಮಂಗಳೂರಿನಲ್ಲೂ ನಾಗರಿಕರು ಸ್ವಯಂಪ್ರೇರಿತವಾಗಿ ಪ್ರತಿಭಟನೆಯನ್ನು ನಡೆಸುವ ಸಂಧರ್ಭದಲ್ಲಿ ಪೋಲೀಸರು ತಮ್ಮ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಪ್ರತಿಭಟನೆಯನ್ನು ಸಮಾಧಾನಕರವಾಗಿ ನಿಯಂತ್ರಣಕ್ಕೆ ತರಬೇಕಾದ ಪೋಲೀಸ್ ಅಧಿಕಾರಿಗಳು ಪ್ರತಿಭಟನೆಯಲ್ಲಿರುವವರ ಮೇಲೆ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ಮಾಡಿರುವುದು ಖಂಡನೀಯವಾಗಿದೆ.

ಪೋಲೀಸ್ ಅಧಿಕಾರಿಗಳ ದೌರ್ಜನ್ಯದಿಂದ ಇಬ್ಬರು ಹುತಾತ್ಮರಾಗಿದ್ದಲ್ಲದೇ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ಮಂಗಳೂರು ಒಂದು ರಣರಂಗವಾಗಿ ಮಾರ್ಪಟ್ಟಿದೆ.

ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿದ ಪೋಲೀಸರ ಈ ದೌರ್ಜನ್ಯವನ್ನು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ಖಂಡಿಸುವುದಲ್ಲದೇ ಇಂತಹ ಪೋಲೀಸರ ವಿರುದ್ದ ಸರಕಾರ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ ವ್ಯಕ್ತಪಡಿಸುತ್ತಿದ್ದೇವೆ.

error: Content is protected !! Not allowed copy content from janadhvani.com