ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ತಖದ್ದುಮ್ 2019 ಮತ್ತು ಪೌರ ಸಮ್ಮೇಳನವು ನಾಳೆ ಮಸ್ಕತ್ ನ ಸೀಬ್ ವೇವ್ಸ್ ಅಲ್ ಹೇಲ್ ರೆಸ್ಟೋರೆಂಟ್ ನಲ್ಲಿ ನಡೆಯಲಿದೆ. ಕೆಸಿಎಫ್ ಒಮಾನ್ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಬಹು ಉಮರ್ ಸಖಾಫಿ ಮಿತ್ತೂರು ಇವರು ನೆರವೇರಿಸಲಿದ್ದಾರೆ.
ಕೆಸಿಎಫ್ ಒಮಾನ್ ರಾಷ್ಟ್ರೀಯ ಮತ್ತು ಝೋನ್ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮಾತ್ರ ಮೀಸಲಾಗಿರುವ ತಖದ್ದುಮ್ 2019 ಕಾರ್ಯಕ್ರಮಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಸ ಅದಿ ಈಶ್ವರಮಂಗಲ (ಅಬುದಾಬಿ) ಇವರು ನೇತ್ರತ್ವವನ್ನು ನೀಡಲಿದ್ದಾರೆ.
ಪೌರ ಸಮ್ಮೇಳನ ದಲ್ಲಿ “ಜಾತ್ಯತೀತ ರಾಷ್ಟ್ರ- ಧಾರ್ಮಿಕ ಪೌರತ್ವ” ಈ ವಿಷಯವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಹಮೀದ್ ಪಿ.ಎಂ.ಎಚ್ ಈಶ್ವರಮಂಗಲ (ಯು.ಎ.ಇ.) ಇವರು ಮಂಡಿಸಲಿದ್ದಾರೆ. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಕೊಡಗು,ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ,ಇಬ್ರಾಹಿಮ್ ಬ್ರೈಟ್ ಮಾರ್ಬಲ್ ಕೋಶಾಧಿಕಾರಿ ಕೆಸಿಎಫ್ ಯುಎಇ ಇವರ ಉಪಸ್ಥಿತಿಯಲ್ಲಿ ನಡೆಯಲಿರವ ಕಾರ್ಯಕ್ರಮವನ್ನು ಎಲ್ಲಾ ಅನಿವಾಸಿ ಕನ್ನಡಿಗರು ಸದುಪಯೋಗ ಪಡಿಸಬೇಕೆಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಮಾಧ್ಯಮ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.