ಬೋಳಂತೂರು: SJM ಕರ್ನಾಟಕ ರಾಜ್ಯ ಇದರ ನಿರ್ದೇಶನದಂತೆ ಮುಅಲ್ಲಿಂ ಮೆಹರ್ ಜಾನ್ ಇತ್ತೀಚೆಗೆ SJM ಬೋಳಂತೂರು ರೇಂಜಿನ ಸೆರ್ಕಳ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷರಾದ ಮಹ್ ಮೂದ್ ಸಅದಿ ಬಾರೆಬೆಟ್ಟು ವಹಿಸಿದ್ದರು.ಅಬ್ದುಲ್ ಖಾದಿರ್ ಸಖಾಫಿ ಬೋಳಂತೂರು ಸಭೆಯನ್ನು ಉದ್ಘಾಟಿಸಿದರು.ತೀರ್ಪುಗಾರರಾಗಿ ಅಬ್ದುಲ್ ಮಜೀದ್ ಸಖಾಫಿ ಕೌಡೇಲು,ಅಬ್ಬಾಸ್ ಸಅದಿ ಬೊಳ್ಳಾಯಿ,ಹನೀಫ್ ಮುಸ್ಲಿಯಾರ್ ವಳವೂರು ಆಗಮಿಸಿದರು.
ಸಮಾರೋಪ ಸಮಾರಂಭದಲ್ಲಿ ತಾಜುಲ್ ಉಲಮಾ ನೂರುಲ್ ಉಲಮಾ ಅನುಸ್ಮರಣೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.ರೇಂಜ್ ಕೋಶಾಧಿಕಾರಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ದುಆ ಕ್ಕೆ ನೇತೃತ್ವ ನೀಡಿದರು. ಸೆರ್ಕಳ ಖತೀಬ್ ಶಕೀರ್ ಸಅದಿ ಸಬೆಯನ್ನು ಉದ್ಘಾಟಿಸಿದರು. ದಾರುಲ್ ಅಶ್ ಅರಿಯ್ಯ ಜನರಲ್ ಮೇನೇಜರ್ ಮುಹಮ್ಮದ್ ಅಲಿ ಸಖಾಫಿ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ SMA ಬೋಳಂತೂರು ರೀಜನಲ್ ಅಧ್ಯಕ್ಷರಾದ CH ಅಬೂಬಕ್ಕರ್,SMA ಕೋಶಾಧಿಕಾರಿ ಮುತ್ತಲಿಬ್ ಹಾಜಿ ಕೆ.ಪಿ ಬೈಲು
ಉಪಸ್ಥಿತಿತರಿದ್ದರು.ಕೊನೆಯಲ್ಲಿ ಇತ್ತೀಚೆಗೆ SYS ಜಿಲ್ಲಾ ವೆಸ್ಟ್ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಉಸ್ತಾದರನ್ನು ಸನ್ಮಾನಿಸಲಾಯಿತು.
ರೇಂಜ್ ವ್ಯಾಪ್ತಿಯ ಎಲ್ಲಾ ಉಸ್ತಾದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಕಲಾ ಪ್ರತಿಭೆ ಯಾಗಿ ಅಬ್ದುಲ್ ಲತೀಫ್ ಸಖಾಪಿ ಕೆ.ಪಿ ಬೈಲು ಆಯ್ಕೆಯಾದರು.
ರೇಂಜ್ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಪಿ ಸ್ವಾಗತಿಸಿ ಮೆಹರ್ ಜಾನ್ ಕನ್ವಿನರ್ ಮುಹಮ್ಮದ್ ರಫೀಖ್ ಸಖಾಫಿ ನಾರ್ಶ ವಂದಿಸಿದರು.
✍ ಅಕ್ಬರ್ ಅಲಿ ಮದನಿ ಸೆರ್ಕಳ ನಗರ