janadhvani

Kannada Online News Paper

ಕೆ.ಸಿ.ಎಫ್ ಯುಎಇ ವತಿಯಿಂದ ಡಿ.20 ರಂದು ಪೌರ ಸಮ್ಮಿಲನ

ಶಾರ್ಜಾ: ಭಾರತಾದ್ಯಂತ ಜಾತ್ಯಾತೀತ ಮನೋಭಾವದ ಜನರ ಮನಸ್ಸಲ್ಲಿ ಗೊಂದಲಗಳನ್ನು ಸೃಷ್ಟಿಸಿ, ಧರ್ಮಗಳ ಆದಾರದಲ್ಲಿ ಜನರನ್ನು ಬೇರ್ಪಡಿಸಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (NRC& CAA) ಜಾರಿಗೊಳಿಸಲು ಹೊರಟಿರುವ ಭಾರತ ಸರಕಾರದ ಈ ನಡೆಯ ಕುರಿತಾಗಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ “ಜಾತ್ಯಾತೀತ ರಾಷ್ಟ್ರ- ಧಾರ್ಮಿಕ ಪೌರತ್ವ” ಎಂಬ ವಿಷಯದಲ್ಲಿ ವಿಚಾರ ಸಂಕಿರಣ ಪೌರ ಸಮ್ಮಿಲನ‌ವು ಡಿ. 20 ರಂದು ಯಾಸತ್ ಟವರ್ ಶಾರ್ಜಾದಲ್ಲಿ ನಡೆಯಲಿದೆ.

ಸಮಾಜದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ ನಡೆಯುವ ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶವನ್ನು ನಿಗದಿಪಡಿಸಲಾಗಿದೆ.

ಕೆಸಿಎಫ್ ರಾಷ್ಟ್ರೀಯ ಸಮಿತಿ, ಯುಎಇ.

error: Content is protected !! Not allowed copy content from janadhvani.com