ರಿಯಾದ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಬದಿಯ ಸೆಕ್ಟರ್ ಇದರ ಆಶ್ರಯದಲ್ಲಿ ಜೀಲಾನಿ, ತಾಜುಲ್ ಉಲಮಾ, ನೂರುಲ್ ಉಲಮಾ ಹಾಗೂ ನಮ್ಮನ್ನಗಲಿದ ನೇತಾರರ ಅನುಸ್ಮರಣೆ ಹಾಗೂ ಮಾಸಿಕ ಮಹ್ಳರತುಲ್ ಬದ್ರಿಯ್ಯಾ ಸ್ವಲಾತ್ ಮಜ್ಲಿಸ್ ಕೆಸಿಎಫ್ ಬದಿಯ ಸೆಕ್ಟರ್ ಶಿಕ್ಷಣ ಇಲಾಖೆ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ರಿಯಾದ್ ಝೋನ್ ಮಟ್ಟದ “ಸ್ನೇಹ ಸಂಗಮ” ಕಾರ್ಯಕ್ರಮದ ಭಾಗವಾಗಿ ನಡೆದ ಕ್ವಿಝ್ ಕಾರ್ಯಕ್ರಮದಲ್ಲಿ ಬದಿಯ ಸೆಕ್ಟರ್ ನಿಂದ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದ ವಾದಿಲಬನ್ ಯುನಿಟ್ ಪ್ರಧಾನ ಕಾರ್ಯದರ್ಶಿ ನಝೀರ್ ಕೃಷ್ಣಾಪುರ ರವರನ್ನು ಸನ್ಮಾನಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಹಮೀದ್ ಮಠ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ ಮತ್ತು ರಾಷ್ಟ್ರೀಯ ಶಿಕ್ಷಣ ಇಲಾಖೆ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಅನುಸ್ಮರಣಾ ಪ್ರಭಾಷಣ ನಡೆಸಿದರು.
ಕೆಸಿಎಫ್ ರಾಷ್ಟ್ರಿಯ ಸಮಿತಿ ಸದಸ್ಯ ಹಾಗೂ ರಿಯಾದ್ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷ ಮಜೀದ್ ವಿಟ್ಲ, ರಿಯಾದ್ ಝೋನ್ ನಾಯಕರಾದ ಇಲ್ಯಾಸ್ ಲತೀಫಿ, ರಶೀದ್ ಮದನಿ, ಅಶ್ರಫ್ ಕಿಲ್ಲೂರು, ನವಾಝ್ ಚಿಕ್ಕಮಗಳೂರು, ನಝೀರ್ ಕಕ್ಕಿಂಜೆ, ಇಮ್ರಾನ್ ಬಶೀರ್, ಬದಿಯ ಸೆಕ್ಟರ್ ಹಾಗೂ ಶಾರಾ ಅಬ್ರಾಝ್, ಶಾರಾ ಮದೀನ, ವಾದಿ ಲಬನ್ ಯುನಿಟ್ ನಾಯಕರು ಉಪಸ್ಥಿತರಿದ್ದರು.
ಕೊನೆಯಲ್ಲಿ ಬದಿಯ ಸೆಕ್ಟರ್ ಸಂಘಟನಾ ಕಾರ್ಯದರ್ಶಿ ಬಶೀರ್ ಮೂರುಗೋಳಿಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.