ದುಬೈ: ಕೊಂಡಂಗೇರಿಯ ಅನಿವಾಸಿ ಸದಸ್ಯರುಗಳ ಒಕ್ಕೂಟವಾದ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಸಮಿತಿ ವತಿಯಿಂದ ಈ ವರ್ಷದ ಮೀಲಾದ್ ಸಮಾವೇಶ ಹಾಗೂ ವಾರ್ಷಿಕ ಮಹಾ ಸಭೆ ದುಬೈ ಕ್ರೀಕ್ ನಲ್ಲಿರುವ ಧೋ ಕ್ರೂಸ್ ಬೋಟ್ ನಲ್ಲಿ ನಡೆಸಲಾಯಿತು. ಸಮಿತಿ ಅಧ್ಯಕ್ಷರಾದ ಹೆ ಹೆಚ್ ಅಬ್ದುಲ್ಲಾ ರವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಂಝ ಸಅದಿ ಉದ್ಘಾಟಿಸಿದರು.
ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸರ್ವವನ್ನು ಕಳೆದುಕೊಂಡು ಬೀದಿಪಾಲಾದ ಜನರ ಕಣ್ಣೀರೊರೆಸಲು ತನ್ನ ಒಂದೂವರೆ ಎಕರೆ ಜಮೀನನ್ನು ಧಾನವಾಗಿ ನೀಡಿದ ಕೊಂಡಂಗೇರಿಯ ಅಬ್ದುಲ್ಲಾ ಹಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಅವರನ್ನು ಈ ಸಂಧರ್ಭದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾಸಲಾಯಿತು, ಶಾಫಿ ಸಖಾಫಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಭೆಗೆ ಹೊಸ ಹುರುಪನ್ನು ನೀಡಿತು.
ನಂತರ ನಡೆದ ಮಹಾಸಭೆಯಲ್ಲಿ ಹಾಲೀ ವರ್ಷದಲ್ಲಿ ಊರಿನಲ್ಲಿ ನಡೆಸಿದ ಸಾಂತ್ವನ ಕಾರ್ಯಗಳನ್ನು ವಿವರಿಸಿ ವಾರ್ಷಿಕ ವರದಿಯನ್ನು ವಾಚಿಸಲಾಯಿತು. ನೂತನ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಬ್ದುಲ್ಲ ಹೆಚ್ ಹೆಚ್ ಮತ್ತು ಪ್ರಧಾನ ಕಾರ್ಯಧರ್ಶಿಯಾಗಿ ಇರ್ಷಾದ್ ಎ ಹೆಚ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಹಾಜಿ ಪಿ ಇ ರವರನ್ನು ಪುನರಾಯ್ಕೆ ಮಾಡಲಾಯಿತು. ಅದೇ ರೀತಿ 15 ಸದಸ್ಯರುಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಹಿರಿಯ ಸದಸ್ಯರುಗಳಾದ ಅಬ್ದುಲ್ಲಾ ಎಲಿಯಂಗಾಡು, ಅಬ್ದುಲ್ಲಾ ಮುಸ್ಲಿಯಾರ್, ಆಝೀಝ್ ಹೆಚ್ ವೈ, ಹಸ್ಸನ್ ಕುಞ ಕೇತುಮೊಟ್ಟೆ, ಸೇರಿದಂತೆ ಯುಎಇಯ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಸುವ ಹಲವಾರು ಕೊಂಡಂಗೇರಿಯ ಸದಸ್ಯರುಗಳು ಭಾಗವಹಿಸಿದ್ದರು. ರಿಯಾಝ್ ಕೆ ವೈ ಸ್ವಾಗತ ನಿರ್ವಹಿಸಿದರು. ಇರ್ಷಾದ್ ಎ ಹೆಚ್ ಕಾರ್ಯಕ್ರಮ ನಿರೂಪಿಸಿದ್ದು, ಕೊನೆಯಲ್ಲಿ ಮುಜೀಬ್ ಪಿ ಎ ವಂದಿಸಿದರು.