janadhvani

Kannada Online News Paper

ಕೆಸಿಎಫ್ ಸೌದಿ, ದಮ್ಮಾಮ್ ಝೋನ್: ಪ್ರತಿಭೋತ್ಸವ ಹಾಗೂ ಇನಿಸ್ಪಿಯರ್ ಕಾರ್ಯಕ್ರಮ

ದಮ್ಮಾಮ್ ಅನಿವಾಸಿ ಕನ್ನಡಿಗರ ಏಕೈಕ ಸುನ್ನಿ ಸಂಘಟನೆ ಕೆಸಿಎಫ್ ಸೌದಿಅರೇಬಿಯಾದ ದಮ್ಮಾಮ್ ಝೋನ್ ವತಿಯಿಂದ ಝೋನ್ ಮಟ್ಟದ ಪ್ರತಿಭೋತ್ಸವ ಮತ್ತು ಇನಿಸ್ಪಿಯರ್ ಕಾರ್ಯಕ್ರಮವು ದಿನಾಂಕ 20/12/2019 ಶುಕ್ರವಾರದಂದು ಅಪರಾಹ್ನ 12:30 ಕ್ಕೆ ಸರಿಯಾಗಿ ದಮ್ಮಾಮ್ 91 ನಲ್ಲಿರುವ ಪನೋರಮಾ ಇಸ್ತಿರಾಹ್‌ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಜಮಾ‌ಅತ್ ಇದರ ಪ್ರಧಾನ ಕಾರ್ಯದರ್ಶಿಯಾದ ಶಾಫಿ ಸ‌ಅದಿ ಬೆಂಗಳೂರು, ಕೆಸಿಎಫ್ ಅಂತರ್ರಾಷ್ಟ್ರೀಯ ಅಧ್ಯಕ್ಷರಾದ ಹಾಜಿ ಶೇಖ್ ಭಾವ ಮಂಗಳೂರು ಮತ್ತು ಇನ್ನಿತರ ನೇತಾರರು ಪಾಳ್ಗೊಳ್ಳಲಿದ್ದಾರೆ ಎಂದು, ದಿನಾಂಕ 13/12/2019 ರಂದು ದಮ್ಮಾಮ್‌ನ ರೋಝ್ ಅಡಿಟೋರಿಯಂನಲ್ಲಿ ಸ್ವಾಗತ ಸಮಿತಿ ಚೇರ್ಮನ್ ಖಮರುದ್ದೀನ್ ಗೂಡಿನ ಬಳಿ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .

ಕೆಸಿಎಫ್ ಸೌದಿ ಅರೇಬಿಯ ರಾಷ್ಟ್ರೀಯ ಚೇರ್ಮನ್ ಡಿಪಿ ಯೂಸುಫ್ ಸಖಾಫಿ ಬೈತಾರ್, ಐಎನ್‌ಸಿ ಇಹ್ಸಾನ್ ವಿಭಾಗದ ಚೇರ್ಮಾನ್ ಅಬೂಬಕ್ಕರ್ ರೈಸ್ಕೊ ಪಡುಬಿದ್ರಿ, ಕೆಸಿಎಫ್ ಸೌದಿಅರೇಬಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ, ಕೋಶಾಧಿಕಾರಿ ಮಹಮ್ಮದ್ ಕಲ್ಲರ್ಬೆ, ಸ್ವಾಗತ ಸಮಿತಿ ಕನ್ವಿನರ್ ಉಮರುಲ್ ಫಾರೂಖ್ ಕಾಟಿಪಳ್ಳ, ದಮ್ಮಾಮ್ ಝೋನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಯವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.