ಎಮ್ಮೆಮಾಡು: ಕೊಡಗು ಸುನ್ನೀ ವೆಲ್ಫೇರ್ ಅಸೋಶಿಯೇಷನ್ ಸೌದಿ ಅರೇಬಿಯ್ಯಾ ಹಾಗೂ ಕೊಡಗು ಜಿಲ್ಲಾ SYS ಸಂಯುಕ್ತ ಆಶ್ರಯದಲ್ಲಿ ಕಳೆದ ರಮಲಾನಿನಲ್ಲಿ ತೀರ್ಮಾನಿಸಿದ ಕೊಡಗು ಜಿಲ್ಲೆಯ 3 ತಾಲ್ಲೂಕುಗಳಲ್ಲಿರುವ ಬಡವರಿಗಾಗಿ 3 ವಸತಿ ನಿರ್ಮಾಣ ( ದಾರುಲ್ ಖೈರ್) ಪದ್ದತಿಯ ಮೊದಲನೆ ಮನೆಯ ಉದ್ಘಾಟನೆ ನಡೆಯಿತು.
ಎಮ್ಮೆಮಾಡುವಿನಲ್ಲಿ ದಿನಾಂಕ 9/12/2019 ಸೋಮವಾರ 11 ಗಂಟೆಗೆ ಕೂರ್ಗ್ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಮಹ್ಮೂದ್ ಉಸ್ತಾದ್ ಎಡಪ್ಪಲಂ ರವರು ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು.
ಕೊಡಗು SYS ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಹಫೀಳ್ ಸಅದಿಯವರು ವಿಷಯ ಮಂಡಿಸಿದರು.
SYS ನಾಪೋಕ್ಲು ಸೆಂಟರ್ ಅಧೀನದಲ್ಲಿ ಬರುವ ಎಮ್ಮೆಮಾಡು ಇಸ್ಮಾಯಿಲ್ ಮುಸ್ಲಿಯಾರ್ ಮಂಞೇರಿ ರವರ ಮನೆ ಕಳೆದ ವರ್ಷ ವಿಪರೀತ ಮಳೆಯಿಂದಾಗಿ ನಷ್ಟವಾಗಿತ್ತು. ಪ್ರಸ್ತುತ ಮನೆಯನ್ನು SYS ಕೊಡಗು ಜಿಲ್ಲಾ ಸಮಿತಿಯ ನೇತೃತ್ವದ ಸಹಾಯದಿಂದ ಪುನರ್ ನಿರ್ಮಾಣ ಮಾಡಲಾಯಿತ್ತು.
SYS ನಾಪೋಕ್ಲು ಸೆಂಟರ್ ಅಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ SYS ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಕಡಂಗ, SYS ನಾಪೋಕ್ಲು ಸೆಂಟರ್ ಕಾರ್ಯದರ್ಶಿ ಮುಜೀಬ್, SYS ಕೊಡಗು ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲ ಸಖಾಫಿ, SYS ಸೆಂಟರ್ ಹಾಗೂ ಶಾಖೆಯ ಕಾರ್ಯಕರ್ತರು, ಹಾಗೂ KSWA ಜಿದ್ದಾ ಝೋನಲ್ ಸದಸ್ಯ ಅಲೀ ಅಯ್ಯಂಗೇರಿ ರವರು ಉಪಸ್ಥಿತರಿದ್ದರು.
✍🏻KSWA ಸೌದಿ ಅರೇಬಿಯ್ಯಾ ರಾಷ್ಟ್ರೀಯ ಸಮಿತಿ