ದಮಾಮ್: ಪವಿತ್ರ ಹಜ್ ಮುಗಿದ ನಂತರ ಸೌದಿ ಹಜ್ ಉಮ್ರಾ ಸಚಿವಾಲಯವು 1,647,662 ಉಮ್ರಾ ವೀಸಾಗಳನ್ನು ನೀಡಿದೆ. ಈ ಪೈಕಿ 1,386,183 ಮಂದಿ ಉಮ್ರಾ ನಿರ್ವಹಿಸಲು ಪವಿತ್ರ ಭೂಮಿಗೆ ಬಂದಿದ್ದಾರೆ. ಉಮ್ರಾ ಮುಗಿಸಿ 1,075,738 ಜನರು ತಮ್ಮ ಊರಿಗೆ ತೆರಳಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
1,328,647 ಯಾತ್ರಾರ್ಥಿಗಳು ವಿಮಾನದಲ್ಲಿ ಆಗಮಿಸಿದ್ದರು. 57,525 ಹಡಗಿನ ಮೂಲಕ ಮತ್ತು 11 ಸಮುದ್ರದ ಮೂಲಕ ಬಂದಿದ್ದಾರೆ. ಈ ಋತುವಿನಲ್ಲಿ ಹೆಚ್ಚಿನ ಯಾತ್ರಾರ್ಥಿಗಳು ಪಾಕಿಸ್ತಾನದಿಂದ ಬಂದಿದ್ದು, ಪಾಕಿನ 373,984 ಮಂದಿ ಉಮ್ರಾಗಾಗಿ ಆಗಮಿಸಿದ್ದಾರೆ. 347,424 ಯಾತ್ರಾರ್ಥಿಗಳೊಂದಿಗೆ ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದ್ದರೆ, ಭಾರತ 210,052 ಯಾತ್ರಾರ್ಥಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ತುರ್ಕಿ, ಬಾಂಗ್ಲಾದೇಶ, ಅಲ್ಜೀರಿಯಾ, ಯುಎಇ, ಇರಾಕ್ ಮತ್ತು ಜೋರ್ಡಾನ್ ಮೊದಲ ಹತ್ತು ಸ್ಥಾನಗಳಲ್ಲಿವೆ.