janadhvani

Kannada Online News Paper

ಕೆಸಿಎಫ್ ಸೊಹಾರ್ ಝೋನ್ ನಾಳೆ ಮೀಲಾದ್ ಜಲ್ಸಾ ಮತ್ತು ಇಹ್ಸಾನ್ ಫೂಟ್ ಪ್ರಿಂಟ್ 2019

ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನವೆಂಬರ್ 28 ಗುರುವಾರ ಸಂಜೆ 8 ಗಂಟೆಗೆ ಅಲ್ ಮನಮ್ ಸೊಹಾರ್ ಹೊಟೆಲ್ ಫಲಜ್ ನಲ್ಲಿ “ಹಬೀಬ್ (ಸ.ಅ.) ನಮ್ಮ ಜತೆಗಿರಲಿ” ಎಂಬ ಘೋಷ ವಾಕ್ಯ ದೊಂದಿಗೆ ಮೀಲಾದ್ ಜಲ್ಸಾ ಮತ್ತು ಇಹ್ಸಾನ್ ಫೂಟ್ ಪ್ರಿಂಟ್- 2019 ನೆಡೆಯಲಿದೆ.

ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಸಾದಿಕ್ ಕಾಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಉದ್ಘಾಟನೆಯನ್ನು
ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಸಂಘಟನಾಧ್ಯಕ್ಷರು ಕೆಸಿಎಫ್ ಒಮಾನ್ ಇವರು ನೆರವೇರಿಸಲಿದ್ದಾರೆ.

ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರಾದ ಹಾಫಿಝ್ ಎಚ್. ಐ. ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಇವರು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಹಾಗೂ ಇಕ್ಬಾಲ್ ಮದನಿ ಬೆಳ್ಳಾರೆ ಮತ್ತು ಕೆಸಿಎಫ್ ಸೊಹಾರ್ ಝೋನ್ ಕಾರ್ಯಕರ್ತರಿಂದ ಬುರ್ದ ಮಜ್ಲಿಸ್ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಜನಾನ್ ಅಯ್ಯೂಬ್ ಕೋಡಿ ಅಧ್ಯಕ್ಷರು ಕೆಸಿಎಫ್ ಒಮಾನ್,ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಮುಹಮ್ಮದ್ ಬಾಖವಿ ಅಧ್ಯಕ್ಷರು ಐಸಿಎಫ್ ಫಲಜ್,ಹಾಗೂ ಎಸ್ಎಸ್ಎಫ್ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾದ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ ಇವರು ಭಾಗವಹಿಸಲಿದ್ದಾರೆ ಎಂದು ಸೊಹಾರ್ ಝೋನ್ ಮೀಡಿಯಾ ಕಾರ್ಯದರ್ಶಿ ಶಫೀಕ್ ಎಲಿಮಲೆ ಸುಳ್ಯ ಇವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.