janadhvani

Kannada Online News Paper

ಯುಎಇ: 60 ದಾಟಿದವರಿಗೂ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು

ದುಬೈ:ವಯಸ್ಸಾದ ಗೃಹ ಕಾರ್ಮಿಕರು ಆರೋಗ್ಯವಂತರಾಗಿದ್ದರೆ, 60 ವರ್ಷದ ನಂತರವೂ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು. ಆದರೆ ಯುಎಇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಷರತ್ತುಗಳಿಗೆ ಒಳಪಟ್ಟು ಮಾತ್ರ ಪರವಾನಗಿ ನೀಡಲಾಗುವುದು ಎಂದು ವ್ಯಕ್ತಪಡಿಸಿದೆ.

ಉತ್ತಮ ಆರೋಗ್ಯ ಹೊಂದಿರುವ ಬಗ್ಗೆ ದೃಢೀಕರಿಸುವ ಸರ್ಕಾರಿ ಅಧಿಕೃತ ಸಂಸ್ಥೆ ನೀಡಿದ ಪ್ರಮಾಣಪತ್ರ. ಉದ್ಯೋಗದಾತನು ಗೃಹ ಉದ್ಯೋಗಿಯ ವೈದ್ಯಕೀಯ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸಲು ಸಿದ್ಧನಾಗಿರಬೇಕು ಮತ್ತು ನಿವಾಸ ವೀಸಾವನ್ನು ಮುಂದುವರಿಸಲು ಅಧಿಕೃತ ಏಜೆನ್ಸಿಗಳಿಂದ ಅನುಮತಿ ಪಡೆಯಬೇಕು ಎಂಬುದು ನಿಬಂಧನೆಗಳಾಗಿವೆ.

ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುವ ಕೆಲಸಗಾರರನ್ನು ಮಂದುವರಿಸಲು ಅನುವು ಮಾಡಬೇಕೆಂದು ಉದ್ಯೋಗದಾತರು ಮತ್ತು ಕುಟುಂಬದ ಸದಸ್ಯರು ನಿರಂತರವಾಗಿ ಒತ್ತಾಯಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಶೀಯ ಉದ್ಯೋಗ ಸಚಿವಾಲಯ (ಎಸಿಇ)ದ ಅಂಡರ್ ಸೆಕ್ರೆಟರಿ ಖಲೀಲ್ ಖೂರಿ ಹೇಳಿದರು.

ಈ ಸುಧಾರಣೆಯು ಯುಎಇಯಿಂದ ನೇಮಕಗೊಂಡ ಮತ್ತು ಮೂರು ತಿಂಗಳೊಳಗೆ ಉದ್ಯೋಗ ಒಪ್ಪಂದಗಳ ಅವಧಿ ಮುಗಿದ ಕಾರ್ಮಿಕರ ವೀಸಾ ನವೀಕರಣಕ್ಕೆ ಮಾತ್ರ ಅನ್ವಯಿಸುತ್ತದೆ.

ಗೃಹ ಕಾರ್ಮಿಕರು, ಖಾಸಗಿ ನಾವಿಕರು, ಕಾವಲುಗಾರರು, ಭದ್ರತಾ ಸಿಬ್ಬಂದಿ, ಕುರುಬ, ವಾಹನ ನಿಲುಗಡೆ ಕೆಲಸಗಾರ, ಮನೆ ಪಾಲನೆ ಮಾಡುವವರು, ಫಾಲ್ಕನ್ ತರಬೇತುದಾರರು, ಖಾಸಗಿ ತರಬೇತುದಾರರು, ಶಿಕ್ಷಕ, ಮನೆಕೆಲಸಗಾರ, ತೋಟಗಾರ, ಖಾಸಗಿ ದಾದಿ, ಖಾಸಗಿ ಪಿಆರ್‌ಒ, ಅಡುಗೆಯವರು ಮುಂತಾದವರಿಗೆ ಇದು ಅನ್ವಯ, ತದ್ಬೀರ್ ಸೇವಾ ಕೇಂದ್ರಗಳ ಮೂಲಕ ವೀಸಾ ಸೇವೆಗಳನ್ನು ಪೂರ್ಣಗೊಳಿಸಬಹುದು.