janadhvani

Kannada Online News Paper

ಉಜಿರೆ: SJM,SMA ಹಾಗೂ SBS ವತಿಯಿಂದ ಮೀಲಾದ್ ಸಂದೇಶ ಜಾಥಾ

ಉಜಿರೆ: ಸುನ್ನಿ ಜಂಇಯ್ಯತುಲ್ ಮು‌ಅಲ್ಲಿಮೀನ್ (SJM), ಸುನ್ನಿ ಮ್ಯಾನೆಜ್‌ಮೆಂಟ್‌ ಅಸೋಸಿಯೇಷನ್ (SMA) ಹಾಗೂ ಸುನ್ನಿ ಬಾಲ ಸಂಘ(SBS) ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ)ರವರ ಜನ್ಮ ಮಾಸಾಚರಣೆಯ ಅಂಗವಾಗಿ ನವೆಂಬರ್ 17 ಅದಿತ್ಯವಾರ ಮಧ್ಯಾಹ್ನ 2.30 ಕ್ಕೆ ಬೆಳಾಲು ಕ್ರಾಸ್‌ನಿಂದ ಉಜಿರೆ ಜಂಕ್ಷನ್ ಹಾದು ಟೌನ್ ಮದರಸ ವಠಾದಲ್ಲಿ ಸಮಾಪ್ತಿಗೊಂಡಿತು.

ಈ ಕಾರ್ಯಕ್ರಮವನ್ನು SMA ರಾಜ್ಯ ಉಪಾಧ್ಯಕ್ಷರಾದ ಬದ್ರುದ್ದೀನ್ ಪರಪ್ಪು ದ್ವಜವನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ನೆರಿಯ ಮಸ್ಜಿದ್ ಖತೀಬರಾದ ಮುಹಮ್ಮದ್ ಶರ್ವಾನಿ ರಝ್ವಿ ಸಂದೇಶ ಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ SMA ಜಿಲ್ಲಾ ಕಾರ್ಯದರ್ಶಿ ಹಾಗೂ SJM ಉಜಿರೆ ರೇಂಜ್ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕಬಕ,SMA ಉಜಿರೆ ರೇಂಜ್ ಅಧ್ಯಕ್ಷರಾದ ಇಬ್ರಾಹಿಂ ಮುಂಡಾಜೆ, SYS ಉಜಿರೆ ಸೆಂಟರ್ ಅಧ್ಯಕ್ಷರಾದ ರಶೀದ್ ಬಲಿಪಾಯ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್,ಕಾರ್ಯದರ್ಶಿ ಅಶ್ರಫ್ KCF, SYS ಉಜಿರೆ ಬ್ರಾಂಚ್ ಪ್ರ.ಕಾರ್ಯದರ್ಶಿ ಹಾರಿಸ್ AtoZ,ಕಾರ್ಯದರ್ಶಿ ಅಶ್ರಫ್ M.H, ಪತ್ರಕರ್ತರಾದ ಅಶ್ರಫ್ ಅಲಿಕುಞಿ ಮುಂಡಾಜೆ, SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಎಂ.ಮುಬೀನ್ ಉಜಿರೆ, ಸದಸ್ಯರಾದ ಮುಸ್ತಫಾ ಉಜಿರೆ ಹಾಗೂ ಉಜಿರೆ ರೇಂಜ್ ವ್ಯಾಪ್ತಿಯ 17 ಮದರಸದ ಉಸ್ತಾದರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಎಂ.ಎಂ.ಉಜಿರೆ