ಕೈಕಂಬ:ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ) ರವರನ್ನು ಹೃದಯದಲ್ಲಿ ಪ್ರೇಮಿಸುವ ಮೂಲಕ ಜೀವನ ಧನ್ಯಗೊಳಿಸಬೇಕೆಂದೂ ಈ ಮೂಲಕ ನೈಜ ಮಾನವನಾಗಿ ಬದುಕಬೇಕೆಂದು ಮರ್ಕಝ್ ನೋಲೇಜ್ ಸಿಟಿಯ ಡೈರಕ್ಟರ್, ಪ್ರಮುಖ ವಿದ್ವಾಂಸರೂ ಆದ ಡಾ. AP ಅಬ್ದುಲ್ ಹಕೀಂ ಅಝ್ಹರಿ ಹೇಳಿದರು.ಅವರು ಅಸಾಸ್ ಎಜುಕೇಷನಲ್ ಸೆಂಟರ್ ಮಲ್ಲೂರಿನಲ್ಲಿ ಸುಬಹಿ ನಮಾಝಿನ ಬಳಿಕ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು.
ಅಸಾಸ್ ಸಂಸ್ಥೆಯ ಸಾರಥಿಯೂ SYS ರಾಜ್ಯ ನಾಯಕರೂ ಆದ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೂನೂರು ಮರ್ಕಝ್ ಗಾರ್ಡನ್ ಮೇಲ್ವಿಚಾರಕರಾದ ಅಬೂಸ್ವಾಲಿಹ್ ಸಖಾಫಿ ,ಎಸ್ ಜೆ ಎಂ ಕೈಕಂಬ ಅಧ್ಯಕ್ಷರಾದ ಕಾಸಿಂ ಮದನಿ ಮಲ್ಲೂರು, ಎಸ್ ಜೆ ಎಂ ಕೈಕಂಬ ರೇಂಜ್ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ, ಎಸ್.ಎಂ.ಎ ಕೈಕಂಬ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ ಸಂಸ್ಥೆಯ ಮುದರ್ರಿಸ್ ಹುಸೈನ್ ಸಖಾಫಿ, ಮುಹಬ್ಬತೇ ಅಸಾಸ್ ಸಮಿತಿಯ ನೇತಾರರು ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೀಲಾದ್ ಜಾಥಾಕ್ಕೆ ಧ್ವಜಾರೋಹಣ ಮಾಡುವ ಮೂಲಕ AP ಅಬ್ದುಲ್ ಹಕೀಂ ಅಝ್ಹರಿರವರು ಚಾಲನೆ ನೀಡಿದರು.
ಇಬ್ರಾಹಿಮ್ ಕಲೀಲ್ ಅಬ್ಬೆಟ್ಟು (ಮುಹಬ್ಬತೇ ಅಸಾಸ್ ಕಮಿಟಿಯ ಪ್ರ ಕಾರ್ಯದರ್ಶಿ)