janadhvani

Kannada Online News Paper

ಕೆ.ಸಿ.ಎಫ್ ಸೌದಿ ಅರೇಬಿಯಾ ವತಿಯಿಂದ ನೆರೆ ಸಂತ್ರಸ್ತ ಬಡವರಿಗೆ ಮನೆ ಮತ್ತು ಆಂಬುಲೆನ್ಸ್ ಹಸ್ತಾಂತರ

ಮಂಗಳೂರು : ಕೆ.ಸಿ.ಎಫ್ ಸೌದಿ ಅರೇಬಿಯಾ ವತಿಯಿಂದ ನೆರೆ ಸಂತ್ರಸ್ತರು ಮತ್ತು ಬಡ 20 ಕುಟುಂಬಗಳಿಗೆ ಆರ್ಥಿಕ ಸಹಾಯ , ಮನೆ ದುರಸ್ಥಿ , ಮನೆ ನಿರ್ಮಾಣ ಯೋಜನೆಯ ಚೆಕ್ ಹಸ್ತಾಂತರ ವನ್ನು ಮತ್ತು ಸೌದಿ ಅರೇಬಿಯಾ ರಿಯಾದ್ ಝೋನ್ ವತಿಯಿಂದ ಆಂಬುಲೆನ್ಸ್ ಅನ್ನು ಮಂಗಳೂರಿನಲ್ಲಿ ನಡೆದ ಹುಬ್ಬುರ‌ಸೂಲ್ ಕಾನ್ಫ‌ರೆನ್ಸ್’ನ‌ಲ್ಲಿ ಭಾರತದ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ನಿರ್ವಹಿಸಿದರು.

ಕ‌ರ್ನಾಟ‌ಕ‌ ಜ‌ಮ್ಯಿಯ್ಯ‌ತುಲ್ ಉಲಮಾ ಅಧ್ಯ‌ಕ್ಷ‌ರಾದ‌ ತಾಜುಲ್ ಫುಕಹಾ ಬೇಕ‌ಲ್ ಉಸ್ತಾದ‌ರು, ಪ್ರ‌ಮುಖ‌ ಸಾದಾತ್’ಗ‌ಳು, ಉಲ‌ಮಾ ಉಮ‌ರಾಗ‌ಳು ಮತ್ತು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ‌ ಸ‌ಮಿತಿ ನಾಯ‌ಕ‌ರು ಉಪಸ್ಥಿತರಿದ್ದರು.