janadhvani

Kannada Online News Paper

ಕಿನ್ಯಾ ಕೆ.ಎಚ್.ಇಸ್ಮಾಈಲ್ ಸಅದಿ ಯವರಿಗೆ ಪಿತೃ ವಿಯೋಗ

ಉಳ್ಳಾಲ: ಕಿನ್ಯ ಗ್ರಾಮದ ಬೆಳರಿಂಗೆ ನಿವಾಸಿ ಕೆ.ಎಚ್. ಅಹ್ಮದ್ ಕುಂಞಿ ಹಾಜಿ ಕೆಲವು ಕಾಲದ ಅಸೌಕ್ಯದಿಂದಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕಿನ್ಯ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು, ಹಲವಾರು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಸಂಜೆ ಬುಖಾರಿ ಮಸೀದಿಯ ಖಬರ್ಸ್ಥಾನದಲ್ಲಿ ನಡೆದ ಮಯ್ಯತ್ ನಮಾಝ್‌ಗೆ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಳ್ ಪೊಸೋಟ್ ನೇತೃತ್ವ ವಹಿಸಿದರು.

ಎಸ್‌ವೈಎಸ್ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ, ಸ‌ಅದಿಯ್ಯಾ ಪೌಂಡೇಷನ್‌ನ ಮ್ಯಾನೇಜರ್ ಕೆ.ಎಚ್.ಇಸ್ಮಾಯೀಲ್ ಸ‌ಅದಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.