janadhvani

Kannada Online News Paper

SSF ಬೆಳ್ತಂಗಡಿ ಡಿವಿಷನ್ ವತಿಯಿಂದ “EXPLORATION -2k19” ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಡಿವಿಷನ್ ವತಿಯಿಂದ “EXPLORATION -2k19” ಕಾರ್ಯಕ್ರಮವು ದಿನಾಂಕ‌ 24/10/2019ನೇ ಗುರುವಾರ ಮಗ್ರಿಬ್ ನಮಾಝಿನ ಬಳಿಕ ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ನಝೀರ್ ಮದನಿ ಅಧ್ಯಕ್ಷತೆಯಲ್ಲಿ ನಡೆಯಿತು.
SSF ದ.ಕ ಜಿಲ್ಲಾ ಸದಸ್ಯ ಇಕ್ಬಾಲ್ ಮಾಚಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.SSF ದ.ಕ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್’ಳರಿ ಪ್ರಸ್ತಾವಿಕವಾಗಿ ಮಾತನಾಡಿದರು.

SYS ರಾಜ್ಯ ಹಿಸಾಬ ಅಮೀರ್ ಉಮರ್ ಸಖಾಫಿ,ಎಡಪ್ಪಾಲ ತರಗತಿ ಮಂಡಿಸಿದರು.SSF ಬೆಳ್ತಂಗಡಿ ಡಿವಿಷನ್ ಪ್ರತಿಭೋತ್ಸವದ ದಿನಾಂಕವನ್ನು ಘೋಷಿಸಿಸಲಾಯಿತು.
ಈ ಕಾರ್ಯಕ್ರಮದಲ್ಲಿ SSF ದ.ಕ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ದ.ಕ ಈಸ್ಟ್ ಝೋನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್, ಸದಸ್ಯ ಸಿದ್ದೀಕ್ ಪರಪ್ಪು, 5 ಸೆಕ್ಟರ್ ಸಮಿತಿ ಪಧಾದಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
SSF ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು ಸ್ವಾಗತಿಸಿದರು,SSF ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಧನ್ಯವಾದವಿತ್ತರು.

✍ಎಂ.ಎಂ.ಉಜಿರೆ