janadhvani

Kannada Online News Paper

ಮೊನ್ನೆ ಅಪಘಾತದಲ್ಲಿ ಮರಣ ಹೊಂದಿದ ಅಬ್ದುಲ್ ಮಜೀದ್, ಸ್ವಾದಿಕ್,ಸುನೈನಾ, ಎಂಬವರ ಕುರಿತು ನಾನು ಮೊನ್ನೆಯಿಂದ ಬಹಳಷ್ಟು ಬರಹಗಳನ್ನು ಓದಿದೆ, ಹಲವಾರು ಭಾಷಣಗಳು,ಒಳ್ಳೆಯ ಮಾತುಗಳನ್ನು ಕೇಳಿದೆ.
ಅದೆಲ್ಲವೂ ಅವರ ಬಗ್ಗೆ ಬಂದ ಒಳ್ಳೆಯ ಅಭಿಪ್ರಾಯವೇ ಹೊರತು ಯಾವುದೇ ಕೆಟ್ಟ ಮಾತುಗಳಾಗಿರಲಿಲ್ಲ.

ಆ ಮೂವರ ಮುಖ ಪರಿಚಯ ನನಗಿಲ್ಲ, ಅದೇನೋ ಗೊತ್ತಿಲ್ಲ ಅವರ ಮರಣದ ಸುದ್ದಿ ಕೇಳಿದ ತಕ್ಷಣ ನನ್ನ ನಾಲಗೆ ತಹ್ಲೀಲ್ ಹೇಳಲು ಕುರ್ಆನ್ ಓದಲು ಸಂಚರಿಸಿದ್ದು ನಿಜವೇ ಸರಿ,
ಅವರು ಮರಣ ಹೊಂದಿದ ಬಳಿಕ ಇವತ್ತಿನ ವರೆಗೂ ಅದೇಕೋ ನನ್ನ ಆಪ್ತರೇ ಮರಣ ಹೊಂದಿದ ರೀತಿ ಬಿಕ್ಕಿ,ಬಿಕ್ಕಿ ಅತ್ತದ್ದು ನಿಜವೇ ಹೌದು.

ಹೌದು!! ಅವರ ಮರಣವೂ ಸುನ್ನೀ ಮಕ್ಕಳಿಗೆ ಪ್ರತಿಯೊಬ್ಬರಿಗೂ ಬೇಸರ ತರಿಸಿದ್ದು ನಿಜವೇ ಸರಿ.
ಅಬ್ದುಲ್ ಮಜೀದ್, ಸ್ವಾದಿಕ್ ಸ್ವತಃಹ ನನ್ನ ಆಪ್ತರೇ ಆಗಿದ್ದರು,
ಏಕೆಂದರೆ ನಾನು ಕಾರ್ಯಾಚರಿಸುವ ನನ್ನ ಹೆಮ್ಮೆಯ ಸಂಘಟನೆಯ ಸಹೋದರ ಸಂಘಟನೆ *KCF* ಎಂಬ ಮಹತ್ತಾದ ಸಂಘಟನೆಯ ಆದರ್ಶ ಕಾರ್ಯಕರ್ತರಾಗಿದ್ದರು ಅವರು.

ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕೆಂಬ ಹೊಸ ಬಯಕೆಯೊಂದಿಗೆ ಊರಿಗೆ ಬಂದು,
ಇನ್ನೇನು ಒಂದೇ ವಾರದಲ್ಲಿ ತನ್ನ ಪತ್ನಿಯೊಂದಿಗೆ ಸುಂದರ ಜೀವನ ಮುನ್ನಡೆಸಬೇಕಿದ್ದ ನಮ್ಮ ಸಹೋದರರು, ತನ್ನ ದಾಂಪತ್ಯ ಜೀವನದ ಆ ಸುಂದರ ಸಮಯ ಉಲಮಾ, ಸಾದಾತುಗಳಿಂದ ತುಂಬಿರಬೇಕು, ಮದುವೆ ಮುಂದಿನ ದಿನ ಹಬೀಬ್ ಸ್ವಲ್ಲಲ್ಲಲಾಹು ಅಲೈಹಿವ ಸಲ್ಲಮರನ್ನು ಪ್ರಕೀರ್ತಿಸುವ ಬುರ್ದಾ ಆಲಾಪನೆಯೊಂದಿಗೆ ಆಗಿರಬೇಕೆಂದು ಕನಸು ಕಂಡಿದ್ದ ಸಹೋದರರು ಇಂದು ಶಾಂತವಾಗಿ ಕಬರ್ ಎಂಬ ಲೋಕದಲ್ಲಿ ಚಿರನಿದ್ರೆಯಲ್ಲಿದ್ದಾರೆ.

ನಿನ್ನೆ 14/10/19 ಸೋಮವಾರ ಸುನ್ನೀ ಸಂಘ ಕುಟುಂಬದ ವತಿಯಿಂದ ಕಬಕ ಮನೆಯಲ್ಲಿ ನಡೆದ ಬೃಹತ್ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮದ ಮಜ್ಲಿಸ್ ನಲ್ಲಿ ತನ್ನ ಮದುವೆಯ ಮುಂದಿನ ದಿನ ಬುರ್ದಾ ಅಲಾಪಣೆ ಮಾಡಬೇಕಿದ್ದ ತಂಡವು ನಿನ್ನೆ ಅನುಸ್ಮರಣಾ ಮಜ್ಲಿಸ್ ನಲ್ಲಿ ಬುರ್ದಾ ಅಲಾಪಣೆ ಮಾಡುವಾಗ ಹೃದಯ ತುಂಬಿ ಹೋಗಿತ್ತು,
ಅಲ್ಲಾಹುವೇ ನೀನು ಮಗ್ಫಿರತ್ ನೀಡು ಅಲ್ಲಾಹ್.(ಆಮೀನ್)

ಒಂದಂತೂ ಸತ್ಯ ಅಬ್ದುಲ್ ಮಜೀದ್, ಸ್ವಾದಿಕ್ ಕಂಡ ಆ ಕನಸು ಆ ಮರಣದ ಜೊತೆಗೆ ನನಸಾಗಿದೆ, ಅವರ ಮರಣದ ಸುದ್ದಿ ಕೇಳುತ್ತಿದ್ದಂತೆ ಸಾವಿರಾರು ಉಲಮಾಗಳು, ಸುನ್ನೀ ಕಾರ್ಯಕರ್ತರು ಅತ್ತ ಧಾವಿಸಿದರು

ಅದೆಷ್ಟೋ ಸುನ್ನೀ ಕಾರ್ಯಕರ್ತರ ನಾಲಿಗೆಗಳು ಅವರಿಗಾಗಿ ಸಂಚರಿಸಿದವು.

ದೇಲಂಪಾಡಿ ಉಸ್ತಾದರ ಮಾತು ಒಂದು ನೆನಪಾಗುತ್ತಿದೆ.
ಅಲ್ಲಾಹನ ಕಳಾವನ್ನು ತಿದ್ದುವವರು ಯಾರು?
ಇಂದು ಅವರು ನಾಳೆ ನಾವು ಅಷ್ಟೇ!
ಪ್ರತಿಯೊಂದು ಶರೀರವು ಮರಣದ ರುಚಿ ನೋಡಲಿದೆ,
ಅವರ ಮರಣದೊಂದಿಗೆ ಏನಾದರೂ ಒಳಿತನ್ನು ಅಲ್ಲಾಹು ಖಂಡಿತಾ ಆ ಕುಟುಂಬಕ್ಕೆ ನೀಡುತ್ತಾನೆ ಎಂಬುವುದು.
ಅಲ್ಲಾಹನು ಅವರನ್ನು ಆ ಕುಟುಂಬಕ್ಕೆ ಸ್ವರ್ಗ ಲೋಕದಲ್ಲಿ ಕಾಣುವ ಭಾಗ್ಯ ನೀಡಲಿ

ಲಕ್ಷ-ಲಕ್ಷ ತಹ್ಲೀಲ್ ಗಳು, ಖತಮುಲ್ ಕುರ್ ಆನ್ ಗಳು ಇದೆಲ್ಲವೂ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಗುವುದು, ಭಾಗ್ಯವಲ್ಲದೇ ಮತ್ತಿನ್ನೇನು?!
ಮೋರ್ಚರಿಯಲ್ಲಿ ಮಹಜರಿಗಿಟ್ಟ ಹಲವಾರು ಮಯ್ಯತ್ ಗಳ ಮೇಲೆ ಹೊರಗೆ ನಿಂತು ತಹ್ಲೀಲ್ ಹೇಳಲು ಜನ ಸಿಗದೇ ಇರುವ ಈ ಸನ್ನಿವೇಶದಲ್ಲಿ ಮೋರ್ಚರಿಯಲ್ಲಿಟ್ಟ ಸುನೈನಾಲ ಮೇಲೆ ಸುನ್ನೀ ಕಾರ್ಯಕರ್ತರು ಹೊರಗಡೆ ನಿಂತು ಹೇಳಿದ ತಹ್ಲೀಲ್ ಗಳು ಅದೆಷ್ಟೋ ಲಕ್ಷಗಳಾಗಿವೆ.

ಭಾಗ್ಯವಂತರಲ್ಲಿ, ಭಾಗ್ಯವಂತರು ಆ ಮೂವರು.
ಶಹೀದಿನ ಪ್ರತಿಫಲ ಪಡೆದು ಮದುಮಗನಂತೆ ಆ ಕಬರ್ ನಲ್ಲಿ ಮಲಗಿರುವ ಅವರು ಭಾಗ್ಯವಂತರಲ್ಲದೇ ಮತ್ತಿನ್ನೇನು?!

ಅವರು ಮರಣ ಹೊಂದಿದ ಸುದ್ದಿ ತಿಳಿದಾಗ ಅದೆಷ್ಟೋ ಉಲಮಾಗಳು, ಸಾದಾತುಗಳು ಕಣ್ಣೀರಿಳಿಸಿ, ಬಿಕ್ಕಿ-ಬಿಕ್ಕಿ ಅತ್ತು ದುವಾ ಮಾಡುವಾಗ, ಆಶ್ಚರ್ಯವಾಗಿ ಹೋಯಿತು.!
ಆ ಸಾದಾತುಗಳು ಕಣ್ಣೀರಿಳಿಸಿ ದುವಾ ಮಾಡಬೇಕಾದರೆ ಅವರು ಈ ಸಂಘಟನೆಯನ್ನು ಎಷ್ಟೊಂದು ನೆಚ್ಚಿಕೊಂಡಿರಬಹುದು.

ನಾನು ಕೂಡ ಆಸೆ ಪಟ್ಟು ಹೋದೆ..
ನಾನು ಮರಣ ಹೊಂದಿದ ಮೇಲೆ ನನಗೂ ಸ್ವಾದಿಕ್ ನಂತೆ, ಮಜೀದ್ ನಂತೆ, ಸುನೈನಾಳಂತೆ ಮದುಮಗನಂತೆ ಆ ಕಬರ್ ಲೋಕಕ್ಕೆ ಪ್ರವೇಶಿಸಬೇಕು.

ಸುನ್ನೀ ಸಂಘ ಕುಟುಂಬ ಅವರ ಮನೆಯಲ್ಲಿ ತಹ್ಲೀಲ್ ಸಮರ್ಪಣೆ ನಡೆಸುತ್ತೇವೆ ಎಂದು ಕರೆಕೊಟ್ಟಾಗ,
ಅವರ ಮುಖ ಪರಿಚಯವಿಲ್ಲದ ಅದೆಷ್ಟೋ ಮಂದಿ ಅವರ ಬ್ಯುಸಿಗಳನ್ನೆಲ್ಲ ಬದಿಗೊತ್ತಿ ಅಲ್ಲಿ ನೆರೆದಿದ್ದರು,

ನಾನು ಅನಿವಾರ್ಯ ನಿಮ್ಮಿತ ಬೆಂಗಳೂರುನಲ್ಲಿದ್ದ ಕಾರಣ ಕಾರ್ಯಕ್ರಮದ ಲೈವ್ ನೋಡಿದಾಗ ಅಚ್ಚರಿಯಾದೆ…
ಸುಬುಹಾನಲ್ಲಾಹ್ ಅವರಿಗಾಗಿ ಮಿಡಿದ ಸುನ್ನೀ ಕಾರ್ಯಕರ್ತರು ಒಂದೋ ಎರಡೋ, ಅದೆಷ್ಟೋ ಸಾವಿರಗಳಾಗಿತ್ತು,
ಎಲ್ಲಾ ಉಲಮಾಗಳ, ಸಾದಾತುಗಳ ಬಾಯಿಗಳಿಂದ ಉದುರಿ ಬಂದ ಮಾತುಗಳು ಅದೆಲ್ಲವೂ ಅವರ ನಿಷ್ಕಲಂಕ ಕಾರ್ಯಾಚರಣೆಯನ್ನು ಉಳಿತನ್ನು ಹೇಳುತ್ತಿತ್ತು.
ಅಲ್ಲಾಹು ಅವರಿಗೆಲ್ಲರಿಗೂ ಮಗ್ಫಿರತ್ ನೀಡಲಿ
ಆ ಕುಟುಂಬಕ್ಕೂ ಸುನ್ನೀ ಕಾರ್ಯಕರ್ತರಿಗೂ ಕ್ಷಮೆಯನ್ನು ದಯಪಾಲಿಸಲಿ-ಆಮೀನ್

✍ ಕೆ.ಪಿ ಬಾತಿಶ್ ತೆಕ್ಕಾರ್

error: Content is protected !! Not allowed copy content from janadhvani.com