janadhvani

Kannada Online News Paper

SYS ಮಾಣಿ ಸೆಂಟರ್ ಪಧಾಧಿಕಾರಿಗಳ ಆಯ್ಕೆ

ಮಾಣಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘಟನೆ ಮಾಣಿ ಸೆಂಟರ್ ಮಹಾಸಭೆಯು ಸೆಂಟರ್ ಅಧ್ಯಕ್ಷರಾದ ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿಯವರ ಘನ ಅಧ್ಯಕ್ಷತೆಯಲ್ಲಿ ದಿನಾಂಕ 06.10.2019ರಂದು ದಾರುಲ್ ಇರ್ಷಾದ್ ಮಾಣಿಯಲ್ಲಿ ನಡೆಯಿತು.

ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಜಿ ಎಂ ಎಂ ಕಾಮಿಲ್ ಉಸ್ತಾದರು ದುವಾ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಸೆಂಟರ್ ಉಪಾಧ್ಯಕ್ಷರಾದ ಇಬ್ರಾಹಿಂ ಸಅದಿ ಮಾಣಿರವರು ಸಭೆಯನ್ನು ಉದ್ಘಾಟಿಸಿದರು. ಸೆಂಟರ್ ಕಾರ್ಯದರ್ಶಿ ಅಬ್ದುರ್ರಶೀದ್ ಸಖಾಫಿ ಗಡಿಯಾರ್ ರವರು ಸ್ವಾಗತಿಸಿದರು. ಸೆಂಟರಿನ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ವೀಕ್ಷಕರಾಗಿ ಜಿಲ್ಲೆಯಿಂದ ಆಗಮಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರವರು ಮುನ್ನುಡಿ ಭಾಷಣವಿತ್ತರು. ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಜಿ ಎಂ ಎಂ ಕಾಮಿಲ್ ಉಸ್ತಾದರು ನೇತ್ರತ್ವ ವಹಿಸಿ 2019-21ರ ಸಾಲಿಗೆ 25 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಿದರು.

ಅಧ್ಯಕ್ಷರಾಗಿ ಇಬ್ರಾಹಿಂ ಸಅದಿ ಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಕೋಶಾಧಿಕಾರಿಯಾಗಿ ಹಾಜಿ ಖಾಸಿಂ ಪರ್ಲೋಟು, ಉಪಧ್ಯಕ್ಷರುಗಳಾಗಿ ಯೂಸುಫ್ ಹಾಜಿ ಸೂರಿಕುಮೇರ್, ಸಂಘಟನೆ ಮತ್ತು ತರಬೇತಿ ಕಾರ್ಯದರ್ಶಿಯಾಗಿ ಹನೀಫ್ ಸಖಾಫಿ ಪೇರಮುಗೇರ್, ಶಿಕ್ಷಣ ಮತ್ತು ದಅ್ ವಾ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಸಖಾಫಿ ಗಡಿಯಾರ್, ಸಾಂತ್ವನ ಮತ್ತು ಇಸಾಬಾ ಕಾರ್ಯದರ್ಶಿಯಾಗಿ ಸುಲೈಮಾನ್ ಸಅದಿ ಪಾಟ್ರಕೋಡಿ, ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿಯಾಗಿ ಸ್ವಾದಿಖ್ ಪೇರಮುಗೇರ್, ಸದಸ್ಯರಾಗಿ ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿ, ಹಂಝ ಮದನಿ ಮಿತ್ತೂರು, ಖಾಸಿಂ ಪಾಟ್ರಕೋಡಿ, ಸುಲೈಮಾನ್ ಸೂರಿಕುಮೇರ್, ಇಬ್ರಾಹಿಂ ಹಾಜಿ ಪೇರಮುಗೇರ್, ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ, ಅಬ್ದುಲ್ ಲತೀಫ್ ಸಅದಿ ಶೇರಾ, ದಾವೂದ್ ಕಲ್ಲಡ್ಕ, ಹಬೀಬ್ ಸೇರ, ಪಿ ಎಚ್ ಅಬ್ದುಲ್ ಲತೀಫ್ ಕಲ್ಲಡ್ಕ, ಹಂಝ ಸೂರಿಕುಮೇರ್, ಅಬ್ದುಲ್ ಖಾದರ್ ಸೇರ, ಹೈದರ್ ಸಖಾಫಿ ಶೇರಾ, ಪಿ ಎಚ್ ಉಮರುಲ್ ಫಾರೂಖ್ ಹನೀಫಿ ಪರ್ಲೋಟು, ಹನೀಫ್ ಮುಸ್ಲಿಯಾರ್ ಪೆರ್ನೆ, ಅಬ್ದುಲ್ ಲತೀಫ್ ಸಅದಿ ಶೇರಾ, ಯಾಕೂಬ್ ನಚ್ಚಬೆಟ್ಟು, ಹಾಜಿ ಅಬ್ದುಲ್ ಖಾದರ್ ಸೂರ್ಯ, ಅಬೂಬಕ್ಕರ್ ವಳಚ್ಚಿಲ್, ಮೊಯ್ದೀನ್ ಕುಟ್ಟಿ ಪೆರ್ನೆ, ರಫೀಕ್ ಮದನಿ ಪಾಟ್ರಕೋಡಿ, ಅಬ್ಬಾಸ್ ಗಡಿಯಾರ್ ಹಾಗೂ ಜಿಲ್ಲಾ ಕೌನ್ಸಿಲರುಗಳಾಗಿ ಜಿ ಎಂ ಎಂ ಕಾಮಿಲ್ ಉಸ್ತಾದ್, ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿ, ಹಂಝ ಮದನಿ ಮಿತ್ತೂರು, ಯಾಕೂಬ್ ನಚ್ಚಬೆಟ್ಟು, ದಾವೂದ್ ಕಲ್ಲಡ್ಕ, ಖಾಸಿಂ ಪಾಟ್ರಕೋಡಿ, ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ, ಯೂಸುಫ್ ಹಾಜಿ ಸೂರಿಕುಮೇರ್, ಸುಲೈಮಾನ್ ಸೂರಿಕುಮೇರ್, ಇಬ್ರಾಹಿಂ ಹಾಜಿ ಪೇರಮುಗೇರ್, ಹನೀಫ್ ಮುಸ್ಲಿಯಾರ್ ಪೆರ್ನೆ, ಅಬ್ದುಲ್ ಲತೀಫ್ ಸಅದಿ ಶೇರಾ, ಅಬ್ದುರ್ರಶೀದ್ ದೋರ್ಮೆ, ಅಬೂಬಕ್ಕರ್ ವಳಚ್ಚಿಲ್, ಮೊಯ್ದೀನ್ ಕುಟ್ಟಿ ಪೆರ್ನೆ, ಪಿ ಎಚ್ ಉಮರುಲ್ ಫಾರೂಖ್ ಹನೀಫಿ ಪರ್ಲೋಟು ಅಬ್ದುಲ್ ರಶೀದ್ ಸಖಾಫಿ ಗಡಿಯಾರ್, ಹೈದರ್ ಸಖಾಫಿ ಶೇರಾ, ಬಿ ಎಂ ಅಶ್ರಫ್, ಮಹಮ್ಮದ್ ಹಬೀಬ್, ಅಬ್ದುಲ್ ಖಾದರ್ ಸೂರ್ಯ, ಸುಲೈಮಾನ್ ಸಅದಿ ಪಾಟ್ರಕೋಡಿ, ಮುಹಮ್ಮದ್ ಪಾಟ್ರಕೋಡಿ, ಸ್ವಾದಿಖ್ ಪೇರಮುಗೇರ್, ಅಬ್ದುಲ್ ಜಲೀಲ್ ಮುಸ್ಲಿಯಾರ್ ಶೇರಾ, ಇಬ್ರಾಹಿಂ ಬಂಗಾರಬೆಟ್ಟು ರವರನ್ನು ಆರಿಸಲಾಯಿತು.

ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರುರವರು ಉಪಸ್ಥಿತರಿದ್ದರು. ಸೆಂಟರಿನ ಹನ್ನೆರಡು ಘಟಕದ ಕೌನ್ಸಿಲರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಕೊನೆಯಲ್ಲಿ ಮರಣಹೊಂದಿದ ಎಸ್. ವೈ.ಎಸ್ ಕಲ್ಲಡ್ಕ ಬ್ರಾಂಚ್ ಕೋಶಾಧಿಕಾರಿ ಕೆ. ಪಿ. ಮೊಯ್ದಿನ್ ರವರ ತಾಯಿ ಬೀಫಾತಿಮಾ ಹಾಗೂ ನಮ್ಮನ್ನಗಲಿದ ಸುನ್ನಿ ಕುಟುಂಬದ ಸದಸ್ಯರಿಗಾಗಿ ತಹ್ಲೀಲ್ ಹೇಳಿ ಪ್ರತ್ಯೇಕ ದುವಾ ಮಾಡಲಾಯಿತು. ನೂತನ ಕಾರ್ಯದರ್ಶಿ ಸ್ವಾದಿಖ್ ಪೇರಮುಗೇರ್ ರವರು ಧನ್ಯವಾದಗಳನ್ನು ಅರ್ಪಿಸಿದರು.