ಅಬುಧಾಬಿ: ಅಪರಿಚಿತರು ಸಂತೋಷದಿಂದ ರಸ್ತೆ ಮಧ್ಯದಲ್ಲಿ ಚಿನ್ನದ ನಾಣ್ಯವನ್ನು ನೀಡಿ ನಿಮ್ಮನ್ನು ಹುರಿದುಂಬಿಸಿದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?. ಅಬುಧಾಬಿಯಲ್ಲಿ ಇದೇ ರೀತಿಯ ಘಟನೆಯ ಕುತೂಹಲಕಾರಿ ಸುದ್ದಿಯನ್ನು ಡ್ಯೂಟಿ ಫ್ರೀ ಬಿಗ್ ಟಿಕೆಟ್ ಪ್ರತಿನಿಧಿಗಳು ಬಹಿರಂಗಪಡಿಸಿದ್ದಾರೆ.

ಬಿಗ್ ಟಿಕೆಟ್ ನಿರೂಪಕ ರಿಚಾರ್ಡ್ ಅವರು ಮುಹಮ್ಮದ್ ಅಬ್ದುಲ್ ತಾಹಿರ್ ಎಂಬ ಯುವಕನಿಗೆ ಚಿನ್ನದ ನಾಣ್ಯವನ್ನು ನೀಡಿದ್ದು, ನೀವು ಇನ್ನೊಬ್ಬರ ಒಂದು ದಿನವನ್ನು ಸಂತೋಷಪಡಿಸಬಹುದೇ ಎಂದು ಕೇಳಿ, ಬಿಗ್ ಟಿಕೆಟ್ ಅಧಿಕೃತ ಚಾನೆಲ್ ಮೂಲಕ ಈ ಕೊಡುಗೆಯನ್ನು ನೀಡುವ ದೃಶ್ಯವನ್ಮು ಅಧಿಕೃತವಾಗಿ ಬಹಿರಂಗಪಡಿಸಿದೆ.

ರಿಚಾರ್ಡ್ ಯುವಕನ ಬಳಿಗೆ ಬಂದು ಈ ತಿಂಗಳು ನಾನು ನಿಮಗೆ ಸಹಾಯ ನೀಡಲೇ ಎಂದು ಕೇಳಿದರು. ನಂತರ ಅವರೊಂದಿಗೆ ನಡೆಯುತ್ತಾ ಚಿನ್ನದ ನಾಣ್ಯವನ್ನು ಕೊಟ್ಟರು. ಬಳಿಕ ಯುವಕನಿಗೆ ತನ್ನ ಜೀವನದ ಆಕಾಂಕ್ಷೆಗಳ ಬಗ್ಗೆ ಮತ್ತು ಚಿನ್ನದ ನಾಣ್ಯ ಏನು ಮಾಡುತ್ತೀರಿ ಎಂದು ಕೇಳಲಾಯಿತು. ತನ್ನ ಆಗ್ರಹದ ಬಗ್ಗೆ ತಿಳಿದಿಲ್ಲ, ಆದರೆ ಚಿನ್ನದ ನಾಣ್ಯವನ್ನು ಮಾರಿ ಅದರಿಂದ ಪಡೆಯುವ ಹಣವನ್ನು ಊರಲ್ಲಿರುವ ತನ್ನ ಕುಟುಂಬಕ್ಕೆ ಕಳುಹಿಸುತ್ತೇನೆ ಎಂದು ಉತ್ತರಿಸಿದನು.
ಅದನ್ನು ನೀಡಲು ಸಾಧ್ಯವಾಗಿದ್ದಕ್ಕೆ ಸಂತೋಷವಿದೆ ಮತ್ತು ಅದನ್ನು ಸುರಕ್ಷಿತವಾಗಿಡಿ ಎಂದು ರಿಚಾರ್ಡ್ ಉತ್ತರಿಸಿದರು. ಸಂತೋಷದಿಂದ ತನ್ನನ್ನು ಅತ್ತು ಬಿಡುವಂತೆ ಮಾಡಿದ ಅಪರಿಚಿತನ ಕಡೆಗೆ ಕೈ ಬೀಸಿ ವಿದಾಯ ಕೋರುವ ತಾಹಿರ್ ದೃಶ್ಯದೊಂದಿಗೆ ನಾಲ್ಕು ನಿಮಿಷಗಳ ವೀಡಿಯೊ ಕೊನೆಗೊಳ್ಳುತ್ತದೆ.






