janadhvani

Kannada Online News Paper

ಸ್ಕಾಲರ್ ಶಿಪ್ ಸಮಸ್ಯೆ : SSF ನಾಯಕರಿಂದ ಅಲ್ಪ ಸಂಖ್ಯಾತ ಕಮಿಷನ್ ಚೇರ್ಮೆನ್ ಭೇಟಿ

ಬೆಂಗಳೂರು.ಸೆ,22: ರಾಜ್ಯದಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಮಂಜೂರಾಗದೆ ಇರುವುದರಿಂದ ಹಲವಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯ ಎಸ್ಸೆಸ್ಸೆಫ್ ನಾಯಕರ ನಿಯೋಗವು ರಾಜ್ಯ ಅಲ್ಪ ಸಂಖ್ಯಾತ ಕಮಿಷನ್ ಚಯರ್ಮ್ಯಾನ್ ಜಿ.ಎ.ಬಾವ ಹಾಗೂ ಕಾರ್ಯದರ್ಶಿ ಅನೀಸ್ ಸಿರಾಜ್ ರವರನ್ನು ಬೆಂಗಳೂರು ಕಛೇರಿಯಲ್ಲಿ ಬೇಟಿ ಮಾಡಿ ಸ್ಕಾಲರ್ ಶಿಪ್ ಸಮಸ್ಯೆ ಬಗ್ಗೆ ಚರ್ಚಿಸಿ, ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಮನವಿ ನೀಡಿತು.

ಮನವಿ ಸ್ವೀಕರಿಸಿದ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು, ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟಿಪದವು,ರಾಜ್ಯ ಸದಸ್ಯರಾದ ಮುಸ್ತಫಾ ಮಾಸ್ಟರ್ ಉಳ್ಳಾಲ, ಸಫ್ವಾನ್ ಚಿಕಮಗಳೂರು, ಸಿಂಡಿಕೇಟ್ ಸದಸ್ಯರಾದ ಉಬೈದುಲ್ಲಾ ಫರೀದ್ ನಗರ ಮೊದಲಾದವರು ಉಪಸ್ಥಿತರಿದ್ದರು.